Friday, October 20, 2023

ರೋಟರಿ ಸಮುದಾಯ ದಳ, ಪದಗ್ರಹಣ

Must read

ಬಂಟ್ವಾಳ : ರೋಟರಿ ಸಮುದಾಯ ದಳ , ಕಡೇಶಿವಾಲಯ ಇದರ 2019 -20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪೆರ್ಲಾಪು ಗ್ರಾಮೀಣ ರೋಟರಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ರೋಟರಿ ಪೂರ್ವಾಧ್ಯಕ್ಷ ವಸಂತ ಪ್ರಭು ಮಾತನಾಡಿ ಸಂಸ್ಥೆಯ ಸ್ಥಾಪನೆ ಸುಲಭ ಅದನ್ನು ಬೆಳೆಸಿಕೊಂಡು ಮುನ್ನಡೆಸುವುದು ಕಷ್ಟಕರ.
ಸದಸ್ಯರ ಹುದ್ದೆಗೆ ಮಾಪಕವಾಗಿ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಹಿರಿಯರಿಗೆ, ಗುರುಗಳಿಗೆ , ಅತಿಥಿಗಳಿಗೆ ಗೌರವ ನೀಡುವ ಗುಣ ಇಂತಹ ಕ್ಲಬ್ ಗಳ ಮೂಲಕ ಸಿಗಲು ಸಾದ್ಯ ವಾಗುತ್ತದೆ, ಸಮಾನ ರೀತಿಯಲ್ಲಿ ಕಂಡು ಸಮಾಜ ಸೇವೆ ಮಾಡುವುದೇ ರೋಟರಿಯ ಮೂಲ ದ್ಯೇಯವಾಗಿದೆ ಎಂದು ಅವರು ಹೇಳಿದರು.

ಈ ಸಂಸ್ಥೆ ಕಳೆದ 30 ವರ್ಷಗಳ ಕಾಲ ಸಮಾಜಮುಖಿ ಕಾರ್ಯಕ್ರಮ ಗಳ ಮೂಲಕ ತೊಡಗಿಸಿಕೊಂಡು ಅಸ್ಥಿತ್ವಕ್ಕೆ ಬೆಲೆ ನೀಡುತ್ತಾ ಬಂದಿರುವ ಕೀರ್ತಿ ಕಡೇಶಿವಾಲಯ ರೋಟರಿ ಸಮುದಾಯ ದಳಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು.

ರೋಟರಿ ಪೂರ್ವಾಧ್ಯಕ್ಷ ವಸಂತ ಪ್ರಭು ಸಮ್ಮುಖದಲ್ಲಿ
ಅಧ್ಯಕ್ಷ ವಾಸು ಪೂಜಾರಿ ನೂತನ ಆದ್ಯಕ್ಷನಾಗಿ ಆಯ್ಕೆಯಾದ ಪ್ರದೀಪ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಮೂಲಕ ಪದಗ್ರಹಣ ನಡೆಸಿದರು.

ಕಡೇಶಿವಾಲಯ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಭಂಡಾರಿ ಅವರು ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ದ ಖಜಾಂಚಿ ರವಿರಾಜ್ ಶೆಟ್ಟಿ, ಮಂಗಳೂರು ಸಿಂಡಿಕೇಟ್ ಬ್ಯಾಂಕ್ ನ ಚೀಪ್ ಮ್ಯಾನೇಜರ್ ಮಾದವ ರೈ ಅಮೈ, ರೋಟರಿ ಸಮುದಾಯ ದಳದ ಅಧ್ಯಕ್ಷ ವಾಸುಪೂಜಾರಿ ಪ್ರತಾಪನಗರ, ಕಾರ್ಯದರ್ಶಿ ಮುಸ್ತಾಪ ಪ್ರತಾಪನಗರ, ನೂತನ ಅಧ್ಯಕ್ಷ ಪ್ರದೀಪ್ ಕುಮಾರ್ ಎಂ.ವಿ, ಕಾರ್ಯ ದರ್ಶಿ ಯೋಗೀಶ್ ನಾಯ್ಕ ಹಾಗೂ ಪದಾಧಿಕಾರಿಗಳಾದ ಪ್ರಸಾದ್ ಪೆರ್ಲಾಪು, ಹರೀಶ್ ಕುಮಾರ್ ಕಲ್ಲಾಜೆ, ಧನುಷ್ ಪೆರ್ಲಾಪು, ದಯಶ್ರೀ ಮುಂಡಾಜೆ, ಜಹೀರ್ ಪ್ರತಾಪನಗರ, ಸಂಪತ್ ಕುಮಾರ್ ಮುಂಡಾಲ, ಮಮತಾವಾಸು ಪೂಜಾರಿ, ವೀರಪ್ಪ ನಾಯ್ಕ ಗಂಡಿಬಾಗಿಲು, ಸಂಜೀವ ಪೂಜಾರಿ ದಾಸಕೋಡಿ ಉಪಸ್ಥಿತರಿದ್ದರು.

ಪೆರ್ಲಾಪು ಸರಕಾರಿ ಪ್ರಾಥಮಿಕ ಶಾಲೆ ಯ ಹಿರಿಯ ನಿವೃತ್ತ ಶಿಕ್ಷಕಿಯಾಗಿದ್ದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿ ಗಳಿಗೆ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾದ ಎಲಿಜಾ ಡಿ.ಸೋಜ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ ಇಬ್ಬರಿಗೆ ಸಾಂತ್ವನ ನಿಧಿ ನೀಡಲಾಯಿತು.

ಮೋಹನ್ ಪೆರ್ಲಾಪು ಸನ್ಮಾನಿತರ ಪರಿಚಯ ವಾಚಿಸಿದರು.
ರೋಟರಿ ಸಮುದಾಯ ದಳದ ಮಾಜಿ ಅಧ್ಯಕ್ಷ ಲೋಕನಾಥ ತಿಮರಾಜೆ ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ನಾಯ್ಕ ಡಿ.ವಂದಿಸಿದರು.

More articles

Latest article