ಹಿಂದೂ ಜನ ಸೇವಾ ಸಮಿತಿ ಬೊಂಡಾಲ, ಬೋಳಂಗಡಿ, ಲಯನ್ಸ್ ಕ್ಲಬ್ ಬಂಟ್ವಾಳ ಇವರ ಆಶ್ರಯದಲ್ಲಿ ಬ್ಲಡ್ ಬ್ಲಾಂಕ್ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಬೋಳಂಗಡಿಯಲ್ಲಿ 72 ರಕ್ತದಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ರಕ್ತದಾನ ಶಿಬಿರದ ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ಜನ ಸೇವಾ ಸಮಿತಿಯ ಅಧ್ಯಕ್ಷರಾದ ನವೀನ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಯಾದ ಎಂ.ಎನ್.ಕುಮಾರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಅತೀ ಹತ್ತಿರವಾದ ವಸ್ತು ರಕ್ತ. ಇದು ಜೀವ ಸಂಚಾರದ ದ್ರವ ಇದರ ದಾನ ವರ್ಗಾವಣೆಯಿಂದ ಈ ದ್ರವ ಶಾಶ್ವತವಾಗಿರುತ್ತದೆ. ಸಾವಿನ ದವಡೆಗೆ ಸಿಲುಕಿದ ವ್ಯಕ್ತಿಗೆ ನಮ್ಮಿಂದ ಜೀವದಾನವಾಗುತ್ತದೆ. ಅನ್ನದಾನ ಒಂದು ಎರಡು ಹೊತ್ತಿನ ಹಸಿವನ್ನು ಮಾತ್ರ ನೀಗಿಸಬಲ್ಲದು. ರಕ್ತದಾನ ಜೀವನದ ಉದ್ದಕ್ಕೂ ಆರೋಗ್ಯವಂತನಾಗಿ ಮಾಡುತ್ತದೆ. ಆದ್ದರಿಂದ ಎಲ್ಲಾ ದಾನಕ್ಕಿಂತಲೂ ರಕ್ತದಾನವೇ ಶ್ರೇಷ್ಟ.
ಮುಖ್ಯ ಅತಿಥಿಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ಪಜಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಧಾಕೃಷ್ಣ ಬಂಟ್ವಾಳ, ಲಯನ್ಸ್ ಕ್ಲಬ್ ಕೋಶಾಧಿಕಾರಿ ದೇವಿಕಾ ದಾಮೋದರ್, ಲಯನ್ಸ್ ವಲಯಾಧ್ಯಕ್ಷರಾದ ಸುಧಾಕರ ಆಚಾರ್ಯ, ಕೆ.ಎಂ.ಸಿ. ಡಾ| ಐಶ್ವರ್ಯ ಇವರೆಲ್ಲರೂ ರಕ್ತದಾನ ಬಗ್ಗೆ ಸವಿವರವಾಗಿ ಮಾತನಾಡಿದರು. ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು, ಮೆಲ್ಕಾರ್ ಯುವ-ಸಂಗಮದ ಸದಸ್ಯರು ಉಪಸ್ಥಿತರಿದ್ದು ಹಿಂದೂ ಜನಸೇವಾ ಸಮಿತಿಯ ಸಂಚಾಲಕರಾದ ಪಿ.ಬಿ. ಗಿರಿಧರ್ ಸ್ವಾಗತಿಸಿ ಕೋಶಾಧಿಕಾರಿ ಸುಧಾಕರ್ ವಂದಿಸಿದರು. ಗುರುಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.