ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಸ್ತಿ ತೆರಿಗರಯೊಂದಿಗೆ ತ್ಯಾಜ್ಯ
ಸಂಗ್ರಹಣಾ ಶುಲ್ಕವನ್ನು 2019 2020 ನೇ ಸಾಲಿಗೆ ಸರಕಾರದ ಅದೇಶದಂತೆ ಕ್ರಮವನ್ನು ಜಾರಿಗೊಳಿಸಲಾಗಿತ್ತು.
ಆದರೆ ಈಶುಲ್ಕ ಅತ್ಯಧಿಕವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರಿಗೆ ದೂರನ್ನು ಬಂಟ್ವಾಳ ಪುರವಾಸಿಗಳು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪುರಸಭೆಯಲ್ಲಿ ವಿಶೇಷ ಸಭೆ ಕರೆದು ತ್ಯಾಜ್ಯ ಸಂಗ್ರಹಣಾ ಶುಲ್ಕ ವನ್ನು ಕಡಿತಗೊಳಿಸಲು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.
ಇದರಂತೆ ಜುಲೈ 20 ರಂದು ಆಡಳಿತಾಧಿಕಾರಿ ಯವರ ಸಾಮಾನ್ಯ ಸಭೆಯಲ್ಲಿ ಮನೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕ ವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿ ವಾಣಿಜ್ಯ ಕೈಗಾರಿಕಾ ಹಾಗೂ ಮಳಿಗೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಡಿ.ಪಿ.ಆರ್.ದರಗಿಂತ ಕಡಿಮೆ ಮಾಡಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪತ್ರಿಕಾ ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.

ಬಿಜೆಪಿ ಅಭಿನಂದನೆ :

ಕಳೆದ ಜುಲೈ 2 ರಂದು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳ ಜತೆ ಪುರಸಭೆಯ ಕುಂದುಕೊರತೆಗಳ ಬಗ್ಗೆ ಸಭೆ ಕರೆದ ಸಂದರ್ಭದಲ್ಲಿ ಪುರಸಭೆಯ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.
ಅದರಲ್ಲಿ ಬಹಳ ಪ್ರಾಮುಖ್ಯವಾದುದು ಕಟ್ಟಡ ತೆರಿಗೆಯ ಜತೆ ತ್ಯಾಜ್ಯ ಸಂಗ್ರಹಣ ಶುಲ್ಕ ವಸೂಲಾತಿಯು ಅಸಮರ್ಪಕವಾಗಿ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂಬ ಜನರ ದೂರಿನ ಬಗ್ಗೆ ಚರ್ಚೆ.
ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕ ಅತಿಯಾಗಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವಂತೆ ಶಾಸಕರು ಸೂಚನೆಯನ್ನು ನೀಡಿದ್ದರು.
ಈ ಬಗ್ಗೆ ನಂತರದ ದಿನಗಳಲ್ಲಿಯೂ ಶಾಸಕರು ನಿರಂತರವಾಗಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಪರಿಣಾಮವಾಗಿ ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕವನ್ನು ಇದೀಗ ಪರಿಷ್ಕರಿಸಲಾಗಿದೆ.
ಶಾಸಕರ ಸೂಚನೆಯಂತೆ ದರ ಪರಿಷ್ಕರಣೆ ಮಾಡಿದ ಅಧಿಕಾರಿಗಳ ಕ್ರಮವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿಯು ಸ್ವಾಗತಿಸಿ ಮಾನ್ಯ ಶಾಸಕರನ್ನು ಮತ್ತು ಅಧಿಕಾರಿ ವರ್ಗವನ್ನು ಅಭಿನಂದಿಸುವುದು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವೊಂದು ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಇಲ್ಲದಿದ್ದು ಅಂತಹ ಪ್ರದೇಶಗಳ ಜನರು ವ್ಯವಸ್ಥೆ ಇಲ್ಲದಿದ್ದರೂ ಕಟ್ಟಡ ತೆರಿಗೆ ಪಾವತಿಯ ಜತೆ ತ್ಯಾಜ್ಯ ಸಂಗ್ರಹ ಶುಲ್ಕ ಪಾವತಿಸಬೇಕಾಗಿದೆ. ಈ ಬಗ್ಗೆಯೂ ಅಧಿಕಾರಿ ವರ್ಗ ಗಮನಹರಿಸ ಬೇಕಾಗಿ ವಿನಂತಿವುದು ಎಂದು ಬಂಟ್ವಾಳ ಬಿಜೆಪಿ ಅಧ್ಯಕ್ಷ
ಬಿ.ದೇವದಾಸ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here