Friday, October 20, 2023

ಪುಣಚ: ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಆರೋಗ್ಯ ಜಾಗೃತಿ ಬೀದಿ ನಾಟಕ

Must read

ಪುಣಚ : ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ’ಜಾನಪದ ಬೀದಿನಾಟಕ’ ಪ್ರದರ್ಶನ ನಡೆಯಿತು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆರೋಗ್ಯಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಪುಣಚ, ಇದರ ಸಂಯುಕ್ತ ಆಶ್ರಯದಲ್ಲಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರತಿಭಾ ಶ್ರೀಧರ್ ಶೆಟ್ಟಿ ದೀಪ ಬೆಳಗಿಸಿ, ಚೆಂಡೆ ಬಾರಿಸುವುದರ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.
ಆರೋಗ್ಯ ಇಲಾಖೆಯ ಕಾರ್‍ಯಕ್ರಮಗಳಾದ ತಾಯಿಕಾರ್ಡ್, ಸಾಂಕ್ರಾಮಿಕ ರೋಗಗಳು, ಸ್ವಚ್ಛತೆ, ಆರೋಗ್ಯ ಮುಂಜಾಗ್ರತಾ ಕಾರ್‍ಯಕ್ರಮ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಇತ್ಯಾದಿ ಸಂದೇಶಗಳನ್ನು ಸಾರುವ ಬೀದಿನಾಟಕ, ಹಾಡುಗಳ ಪ್ರದರ್ಶನವನ್ನು ಮೌನೇಶ್ ವಿಶ್ವಕರ್ಮ ಅವರ ’ಸಂಸಾರ’ ಜೋಡುಮಾರ್ಗ ಬಿ.ಸಿ.ರೋಡು ತಂಡ ನಡೆಸಿ ಕೊಟ್ಟಿತು.
ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ ಸ್ವಾಗತಿಸಿದರು. ಶಿಕ್ಷಕ ಪ್ರಸನ್ನ ಕುಮಾರ್ ವಂದಿಸಿದರು. ಶಶಿಕಲಾ ಸಿಸ್ಟರ್, ಗ್ರಾಮ ಪಂಚಾಯಿತಿ ಸದಸ್ಯೆ ನಳಿನಾಕ್ಷಿ ಆಶಾಕಾರ್‍ಯಕರ್ತೆಯರು ಉಪಸ್ಥಿತರಿದ್ದರು.

 

More articles

Latest article