Wednesday, April 10, 2024

ಅಲ್ಲಿ ಮಂತ್ರಿಮಂಡಲದ ಗೊಂದಲ: ಇಲ್ಲಿ ಅದ್ದೂರಿ ಪ್ರಮಾಣವಚನ..!!!

ಅಲ್ಲಿ ಮಂತ್ರಿಮಂಡಲದ ಗೊಂದಲ: ಇಲ್ಲಿ ಅದ್ದೂರಿ ಪ್ರಮಾಣವಚನ..!!

ಮೌನೇಶ ವಿಶ್ವಕರ್ಮ

ಪುತ್ತೂರು : ಒಂದೆಡೆ ರಾಜ್ಯ ರಾಜಕಾರಣದ ಮಂತ್ರಿ ಮಂಡಲದ ಅನಿಶ್ಚಿತತೆಯ ಸನ್ನಿವೇಶ ಗಳು ಮುಂದುವರಿಯುತ್ತಿದ್ದಂತೆಯೇ, ರಾಜ್ಯ ಸರ್ಕಾರವನ್ನೇ ನಾಚಿಸುವಂತೆ ಪುತ್ತೂರಿನ ಶಾಲೆಯೊಂದರಲ್ಲಿ ಮಂತ್ರಿಮಂಡಲವೊಂದು ಅಸ್ತಿತ್ವಕ್ಕೆ ಬಂದಿದೆ.
ಪುತ್ತೂರಿನ ಪ್ರತಿಷ್ಠಿತ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಮುಖ್ಯಮಂತ್ರಿಯಾಗಿ ವಿತಾಶ್ರೀ ಗೌಡ ಹಾಗೂ
ಉಪಮುಖ್ಯಮಂತ್ರಿಯಾಗಿ ಆಕಾಶ್ ಜೆ.ರಾವ್ ನೇತೃತ್ವದ ಮಂತ್ರಿಮಂಡಲ ಪ್ರಮಾಣವಚನವನ್ನೂ ಸ್ವೀಕರಿಸಿದೆ.

ಮಂತ್ರಿಮಂಡಲದ ನೂತನ ಸದಸ್ಯರನ್ನು ಘೋಷ್ ವಾದನದೊಂದಿಗೆ ವೇದಿಕೆಗೆ ಬರಮಾಡಿಕೊಂಡು ರೈತ ಗೀತೆಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಮಾಲಾ ವಿ.ಎನ್ ಎಲ್ಲರನ್ನು ಸ್ವಾಗತಿಸಿ , ಮುಖ್ಯಮಂತ್ರಿ ಸಹಿತ ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಸಭಾಪತಿಯಾಗಿ ಆತ್ಮಿ,
ಸಾಂಸ್ಕೃತಿಕ ಮಂತ್ರಿ ಯಾಗಿ ಲಿಖಿತಾ,
ಸಹಾಯಕ ಸಾಂ. ಮಂತ್ರಿಯಾಗಿ ತನ್ವಿ,
ಆಹಾರ ಮಂತ್ರಿ ಯಾಗಿ ಶಶಿಕಾಂತ್,
ಸಹಾಯಕ ಆರೋಗ್ಯ ಮಂತ್ರಿಯಾಗಿ ಪೃಥ್ವೀಷ್,
ಕ್ರೀಡಾ ಮಂತ್ರಿಯಾಗಿ ಶಿವಾನಂದ,
ಸಹಾಯಕ ಕ್ರೀ. ಮಂತ್ರಿಯಾಗಿ ಸುಹಾನಿ,
ಕೃಷಿ ಮಂತ್ರಿಯಾಗಿ ಅಭಿಷೇಕ್ ಶೆಣೈ,
ಸಹಾಯಕ ಕೃ.ಮಂತ್ರಿಯಾಗಿ ಉಜ್ವಲ,
ಸ್ವಚ್ಛತಾ ಮಂತ್ರಿಯಾಗಿ ಸಂಜಯ್,
ಸಹಾಯಕ ಸ್ವ.ಮಂತ್ರಿಯಾಗಿ ವಿವೇಕ್,
ಭಜನಾ ಮಂತ್ರಿಯಾಗಿ ಕಾರ್ತಿಕ್,
ಸಹಾಯಕ ಭ.ಮಂತ್ರಿ ಯಾಗಿ ಮೃದುಲಾ,
ನೀರಾವರಿ ಮಂತ್ರಿಯಾಗಿ ಪ್ರಜ್ವಲ್,
ಸಹಾಯಕ ನೀ. ಮಂತ್ರಿಯಾಗಿ ಶ್ರಾವ್ಯ,
ಆರೋಗ್ಯ ಮಂತ್ರಿಯಾಗಿ ವಸೂನ್ ರೈ,
ಸಹಾಯಕ ಆ. ಮಂತ್ರಿಯಾಗಿ ಮಾನ್ಯ,
ವಿದ್ಯಾ ಮಂತ್ರಿಯಾಗಿ ಅಶ್ವಿತ್,
ಸಹಾಯಕ ವಿ. ಮಂತ್ರಿಯಾಗಿ ಚೈತ್ರ,
ಶಿಸ್ತು ನಿರ್ವಹಣಾ ಮಂತ್ರಿಯಾಗಿ ನಚಿಕೇತ್,
ಸಹಾಯಕ ಶಿ.ನಿರ್ವಹಣಾ ಮಂತ್ರಿಯಾಗಿ ಸೃಜನಾ ರವರು ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಸರ್ಕಾರದ ಮಾದರಿಯಲ್ಲೇ ಸಮನ್ವಯ ಸಮಿತಿ ರಚಿಸಲಾಗಿದ್ದು, ಇದರ ನಾಯಕ ರಾಗಿ
ಆಶಿತ್ ರೈ,
ಸದಸ್ಯರಾಗಿ ಅಂಕಿತಾ, ಕರೀಷ್ಮ, ಅಭಿನವ, ರಂಜಿತಾ, ಧವನ್, ಸೃಜನ್, ಪ್ರಜ್ವಲ್, ಅಭಿರಾಮ್, ವಿಭಾಶ್ರೀ, ಶ್ರೀಕರ ರವರು ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್ ರವರು, ನೂತನ ಮಂತ್ರಿಮಂಡಲವನ್ನು ಅಭಿನಂದಿಸಿದರಲ್ಲದೆ, ವಿದ್ಯಾಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ ರವರು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಹಶಿಕ್ಷಕಿ ಶ್ರೀಮತಿ ಪ್ರೀತಿ ಕಾರ್ಯಕ್ರಮ ನಿರೂಪಿಸಿ , ರಮೇಶ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.
ಪ್ರಮಾಣ ವಚನ ಸಮಾರಂಭದ ಆರಂಭದಿಂದ ತೊಡಗಿ ಕೊನೆಯವರೆಗೂ, ಅಧಿಕೃತ ಸರ್ಕಾರಿ ನಿಯಮಗಳನ್ನು ಪಾಲಿಸಿದ್ದು, ಭಾಗವಹಿಸಿದ್ದ ವಿದ್ಯಾರ್ಥಿಗಳಿಗೂ ಸಂವಿಧಾನದ ಪಾಠ ಹೇಳಿಕೊಟ್ಟಂತಿತ್ತು.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...