ಬಂಟ್ವಾಳ: ರಾಜ್ಯದ 4 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಮೊದಲು ದ.ಕ‌.ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವಾಲಯ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ನೇತ್ರತ್ವದಲ್ಲಿ ದೇವಿಗೆ ಸರ್ವ ಅಲಂಕಾರ ಪೂಜೆ ಸಲ್ಲಿಸಿ ಹಾಗೂ ವಿಶೇಷ ಪ್ರಾರ್ಥನೆ ಮಾಡಿದರು.

 

ಬೆಳಿಗ್ಗೆ ಸುಮಾರು 9.30 ರ ವೇಳೆ ಪೊಳಲಿ ದೇವಾಲಯದ ಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಭಕ್ತರ ಸಮ್ಮುಖದಲ್ಲಿ ಯಡಿಯೂರಪ್ಪ ಅವರ ಹೆಸರಿನಲ್ಲಿ ಸರ್ವಾಲಂಕಾರ ಪೂಜೆ ಸಲ್ಲಿಸಲಾಯಿತು.

ಪೊಳಲಿಗೂ ಯಡಿಯೂರಪ್ಪ ಅವರಿಗೂ ವಿಶೇಷ ನಂಟು:
ದೇವಿ ದೇವಾಲಯದ ವಿಶೇಷ ಭಕ್ತರಾಗಿರುವ ಯಡಿಯೂರಪ್ಪ ಅವರು ಈ ಹಿಂದೆ ಎರಡು ಬಾರಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ವೇಳೆ ಪೊಳಲಿ ದೇವಾಲಯ ಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಒಂದು ಬಾರಿ ಡಿ.ಸಿ.ಎಮ್. ಅಗಿದ್ದಾಗಲೂ ಬಂದು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡು ಹೋಗಿದ್ದರು.


ಅಲ್ಲದೆ ಇತ್ತೀಚಿಗೆ ನಡೆದ ಪೊಳಲಿ ಅಮ್ಮನವರ ಬ್ರಹ್ಮಕಲಶೋತ್ಸವ ದ ವೇಳೆಯೂ ದೇವಸ್ಥಾನಕ್ಕೆ ಅಗಮಿಸಿ ದೇವರ ದರ್ಶನ ಪಡೆದುಕೊಂಡು ಹೋಗಿದ್ದರು.

ಇಂದು ಸಂಜೆ 6.30 ರ ಗಂಟೆಯ ವೇಳೆ ಈ ರಾಜ್ಯದ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಯಡಿಯೂರಪ್ಪ ಅವರ ಅಯುಷ್ಯ, ಆರೋಗ್ಯ ಚೆನ್ನಾಗಿರಲಿ ಹಾಗೂ ಮುಖ್ಯಮಂತ್ರಿ ಯಾಗಿ ಉತ್ತಮ ಆಡಳಿತ ನಡೆಸಲಿ ಈ ರಾಜ್ಯದ ಹಾಗೂ ಜಿಲ್ಲೆಯ ಅಭಿವೃದ್ಧಿ ಅವರ ಅವಧಿಯಲ್ಲಿ ಅಗಲಿ ಎಂದು ಪೂಜೆ ಸಲ್ಲಿಸಿ ಪ್ರಸಾದವನ್ನು ಶಾಸಕ ರಾಜೇಶ್ ನಾಯ್ಕ್ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕೊಂಡು ಹೋಗಿದ್ದಾರೆ ಎಂದು ಶಾಸಕರ ಆಪ್ತ ವಲಯ ತಿಳಿಸಿದೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾದ ಯಶವಂತ ಪೊಳಲಿ, ಗಣೇಶ್ ಹಾಗೂ ಪ್ರಮುಖರಾದ ವೆಂಕಟೇಶ್ ನಾವಡ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here