ಬಂಟ್ವಾಳ: ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ 2019-20 ರ ಸಾಲಿನ ನೂತನ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.3ರಂದು (ಇಂದು) ಸಂಜೆ ಲೊರೆಟ್ಟೊ, ಗ್ರೀನ್ ಸಿಟಿ ರೋಟರಿ ಸಭಾಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ರೋ.ಪಿಎಚ್ ಎಫ್ ಅವಿಲ್ ಮೆನೇಜಸ್ ತಿಳಿಸಿದ್ದಾರೆ. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಯ-4 ರ ಸಹಾಯಕ ರಾಜ್ಯಪಾಲ ಮೇಜರ್ ಡೋನರ್ ರಿತೇಶ್ ಬಾಳಿಗಾ, ಹಾಲಿ ಸಹಾಯಕ ರಾಜ್ಯಪಾಲ ಪ್ರಕಾಶ್ ಕಾರಂತ, ರೋ.ಸಂಜೀವ ಪೂಜಾರಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ತಾಲೂಕಿನ ಮೂರು ಸರಕಾರಿ ಶಾಲೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ್ ಕರ್ಪೆ ಅವರನ್ನು ಸನ್ಮಾನಿಸಲಾಗುವುದು, ಕ್ಲಬ್ ಅಸ್ತಿತ್ವಕ್ಕೆ ಬಂದ ಮೊದಲ ವರ್ಷದಲ್ಲಿ ಕ್ಲಬ್ ಗೆ ಸಭಾಭವನದ ನಿರ್ಮಾಣ, ಬಡ ಕುಟುಂಬವೊಂದಕ್ಕೆ ಸೋಲಾರ್ ವ್ಯವಸ್ಥೆ, ಸರಕಾರಿ ಶಾಲೆಯೊಂದಕ್ಕೆ ಪೈಂಟ್ ಬಳಿಯಲಾಗಿದೆ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್, ನಿಯೋಜಿತ ಕಾರ್ಯದರ್ಶಿ ಮೇರಿ ಶೃತಿ ಮಾಡ್ತ, ಹಾಲಿ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್, ರೋ.ಪ್ರಭಾಕರ ಪ್ರಭು ಉಪಸ್ಥಿತರಿದ್ದರು.


