ವಿಟ್ಲ: ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಸ್‌ಡಿಎಂ ಕಾಲೇಜ್ ಮ್ಯಾನೇಜ್‌ಮೆಂಟ್ ಯೂತ್ ಫೆಡರೇಶನ್ ನ ಅಸಿಸ್ಟೆಂಟ್ ಫ್ರೊಫೆಸರ್ ಪ್ರಸನ್ನ ಕುಮಾರ್ ಟಿ. ಇವರ ವತಿಯಿಂದ ಉಚಿತ ನೋಟ್ ಬುಕ್ ಮತ್ತು ಕಂಪಾಸ್ ಬಾಕ್ಸ್ ಹಾಗೂ ವಿಟ್ಲದ ಈಶ್ವರ ಆಂಡ್ ಸನ್ಸ್ ಕ್ಲೋತ್ ಶಾಪ್‌ನವರಿಂದ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ ಸರಳಾಯ, ಉಮಾನಾಥ ರೈ, ಸಂತೋಷ್ ಕುಮಾರ್, ಮುಖ್ಯ ಶಿಕ್ಷಕಿ ಜಯಂತಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.


