ಬಂಟ್ವಾಳ: ಪುದು ಗ್ರಾಮದ ನಾಣ್ಯ ಶ್ರೀ ನಾಗ  ರಕ್ತೇಶ್ವರಿ ಕ್ಷೇತ್ರದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ನಾಗ ಮಂಡಲೋತ್ಸವದ ವಿಜ್ಙಾಪನಾ ಪತ್ರದ ಬಿಡುಗಡೆಯ ಸರಳ ಕಾರ್ಯಕ್ರಮ  ಶ್ರೀ ಕ್ಷೇತ್ರದಲ್ಲಿ ನಡೆಯಿತು.  ಸ್ಥಳೀಯ  ಪ್ರಮುಖರಾದ ದೇವಸ್ಯ ಪ್ರಕಾಶ್ ಚಂದ್ರ ರೈ ವಿಜ್ಙಾಪನಾ ಪತ್ರ ಬಿಡುಗಡೆಗೊಳಿಸಿ, ದೇವರ ಅಭಯದಂತೆ  ಲೋಕ ಕಲ್ಯಾಣಾರ್ಥವಾಗಿ ನಡೆಯುವಂತ ಈ ನಾಗಮಂಡಲೋತ್ಸವದ ಯಶಸ್ವಿಯಲ್ಲಿ ಊರಿನ ನಾಗರಿಕ ಬಂಧುಗಳು  ಸಹಕರಿಸುವಂತೆ ವಿನಂತಿಸಿದರು.

ಈ  ಸಂದರ್ಭ  ಪೊಳಲಿ ಸುಬ್ರಮಣ್ಯ ತಂತ್ರಿ ,  ಸುಜೀರ್ ಗುತ್ತು ಐತಪ್ಪ ಆಳ್ವ , ಸುಜೀರ್ ಗುತ್ತು ಚಂದ್ರಶೇಖರ್ ಗಾಂಭೀರ , ಕಂಪ ಸದಾನಂದ ಆಳ್ವ , ಶಶಿರಾಜ್ ಶೆಟ್ಟಿ ಕೊಳಂಬೆ , ಪೂವಪ್ಪ ಬಂಗೇರ ನಾಣ್ಯ , ಪದ್ಮನಾಭ ಶೆಟ್ಟಿ ಪುಂಚಮೆ , ರಾಮಚಂದ್ರ ಮಾರಿಪಳ್ಳ , ನಾಗಪ್ಪ ಶೆಟ್ಟಿ ಮೇರಮಜಲು , ಗಂಗಾಧರ ಕೋಟ್ಯಾನ್ ಅಬ್ಬೆಟ್ಟು , ಚಂದ್ರಶೇಖರ ತೇಜಾ , ಶಂಕರ ಸುವರ್ಣ , ದೇವದಾಸ್ ಭಂಡಾರ ಮನೆ ಕುಂಭ್ಡೇಲು , ಮತ್ತಿತರರಿದ್ದರು , ತಾರಾನಾಥ ಕೊಟ್ಟಾರಿ ಯವರು ಸ್ವಾಗತಿಸಿದರು , ಮನೋಜ್ ಆಚಾರ್ಯ ನಾಣ್ಯ  ವಂದಿಸಿದರು.   ಪದ್ಮನಾಭ ಮಾಸ್ಟರ್ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here