(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ: ಶ್ರೀ ರಜಕ ಸಂಘ ಮುಂಬಯಿಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗದ ನೇತೃತ್ವದಲ್ಲಿ ಗುರುವಂದನಾ ಪೂಜೆ ಮತ್ತು ವಿದ್ಯಾಥಿಗಳಿಗೆ ಸಹಾಯ ನಿಡುವ ನಿಮಿತ್ತ ಪುಸ್ತಕ ಹಾಗೂ ಸಹಾಯರ್ಥ ಧನ ವಿತರಣಾ ಕಾರ್ಯಕ್ರಮವು ವಿಕ್ರೋಲಿ ಠಾಗೋರ್ ನಗರದ ವಿಕೇಸ್ ಶಾಲೆಯ ಸಭಾಗೃಹದಲ್ಲಿ ಜರಗಿತು.

ಸಂಸ್ಥೆಯ ವಿವಿಧ ಪ್ರಾಂತ್ಯಗಳ ಕಚೇರಿಯ ಮಹಿಳಾ ಮಂಡಳಿಯ ಸದಸ್ಯರ ವತಿಯಿಂದ ಭಜನಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮದ ಶುಭಾರಂಭವಾಯಿತು. ಅಧ್ಯಕ್ಷ ದಾಸು ಸಿ.ಸಾಲ್ಯಾನ್ ದಂಪತಿಗಳು, ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು, ವಿವಿಧ ಪ್ರಾಂತ್ಯದ ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ಮುಖ್ಯ ಅತಿಥಿಯಾಗಿದ್ದ ನಗರದ ಖ್ಯಾತ ಕವಿ -ಸಾಹಿತಿ-ನಾಟಕಗಾರ ಶಿಮಂತೂರು ಚಂದ್ರಹಾಸ ಸುವರ್ಣ ಮತ್ತು ಮಹಿಳ ಮಂಡಳಿ ಸದಸ್ಯರುಗಳು ಭಜನಾ ಮಂಗಳಾರತಿ ಬೆಳಗುವುದರೊಂದಿಗೆ ಭಜನಾ ಕಾರ್ಯಕ್ರಮ ಮುಕ್ತಾಯಗೊಮಡಿತು. ತದನಂತರ ಭಜನಾ ಪ್ರಸಾರ ವಿತರಣೆ ಮಾಡಲಾಯಿತು.

ಗುರುವಂದನಾ ಕಾರ್ಯಕ್ರಮದ ನಿಮಿತ್ತ ರಜಕ ಸಮಾಜದ ಗುರು ನಯನ ಎನ್.ಅತ್ತಾವರ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ಪುಷ್ಪ ಬಿ.ಬಂಗೇರ ಮತ್ತು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಂದ್ರಹಾಸ ಸುವರ್ಣ ಅವರನ್ನು ಅವರವರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳನ್ನು ಪರಿಗಣಿಸಿ ಶಾಲು-ಫಲ ಪುಷ್ಪ -ಸ್ಮರಣಿಕೆಗಳನ್ನು ನೀಡಿ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಲೀಲಾ ಸಾಲ್ಯಾನ್, ವನಿತಾ ಸಾಲ್ಯಾನ್ ಮತ್ತು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗದ ಕಾರ್ಯಾಧ್ಯಕ್ಷ ಬಾಸ್ಕರ್ ಕುಂದರ್ ಸನ್ಮಾನಿತರನ್ನು ಪರಿಚಯಿಸಿದರು.
ಶಿಮಂತೂರು ಚಂದ್ರಹಾಸ ಅವರು ‘ಸಂಸ್ಕಾರದ ಸಂಸಾರ’ ವಿಷಯದಲ್ಲಿ ಶುದ್ದ ತುಳು ಭಾಸೆಯಲ್ಲಿ ನಿರರ್ಗಳ ಉಪನ್ಯಾಸ ನೀಡಿದರು. ಪ್ರತೀ ಸಂಸಾರವೂ ಉತ್ತಮ ರೀತಿಯಿಂದಿರಬೇಕಾದರೆ ಉತ್ತಮ ಸಂಸ್ಕಾರದ ತಳಹದಿ ಅತೀ ಅಗತ್ಯ. ಮಗು ಹುಟ್ಟಿದ ಮೇಲೆ ಸಂಸ್ಕಾರದ ಪಾಠ ಹೇಳುವುದಕ್ಕಿಂತಲೂ ಗರ್ಭದಲ್ಲಿರುವ ಭ್ರೂಣಕ್ಕೆ ಸಂಸ್ಕಾರದ ಅರಿವು ಮೂಡಿಸುವ ಕಾರ್ಯದ ಅಗತ್ಯವಿದೆ. ಆದ್ದರಿಂದ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಉತ್ತಮ ಚಿಂತನೆ ಮಾಡಬೇಕು, ಉತ್ತಮ ಗ್ರಂಥಗಳನ್ನು ಓದಬೇಕು. ಉತ್ತಮ ವಿಚಾರಗಳನ್ನು ಮನನ ಮಾಡಬೇಕು. ಉತ್ತಮ ಒಡನಾಟದಿಂದಿರಬೇಕು. ಹೀಗಾದರೆ ಸತ್ಕರ್ಮ-ಸದ್ವಿಚಾರದಿಂದ ಸುಸಂತಾನ ಹುಟ್ಟಿ ಬರುಲು ಸಾಧ್ಯ. ಯಾವುದೇ ಸಂಘ ಸಂಸ್ಥೆಗಳಾಗಲಿ, ಅಥವಾ ನಮ್ಮ ಮನೆಗಳಾಗಲಿ ಅಲ್ಲಿ ಸ್ರ್ತಿಯರಿಗೆ ಪ್ರಧಾನ ಭೂಮಿಕೆ ಕೊಡುತ್ತೇವೋ ಆ ಸಂಸ್ಥೆ, ಮನೆ ಖಂಡಿತ ಬೆಳಗುತ್ತದೆ. ಅಂತಹ ಸಂಸ್ಥೆ, ಮನೆಗೆ ಶನಿಯ ದೃಷ್ಟಿಯು ತಾಗಲ್ಲಿಕ್ಕಿಲ್ಲ. ಎಲ್ಲಿ ಮನೆಯೊಡತಿ ಕಣ್ಣೀರು ಸುರಿಸುವ ಪರಿಸ್ಥಿತಿ ಬರುತ್ತದೋ ಅಲ್ಲಿ ದರಿದ್ರ ತಪ್ಪದು ಎಂದು ಶಿಮಂತೂರು ನೆರೆದಿರುವ ಕಿಕ್ಕೀರುವ ಸಮಾಜ ಭಾಂಧವರನ್ನು ಅದರಲ್ಲೂ ಬಹು ಸಂಖ್ಯೆಯಲ್ಲಿದ್ದ ಸ್ರ್ತೀ ಶಕ್ತಿಗಳನ್ನು ಉದ್ದೇಶಿಸಿ ತಮ್ಮ ಉಪನ್ಯಾಸವನ್ನು ಮಾಡಿದರು. ಮದ್ಯೆ ಮದ್ಯೆ ತುಳುವಿನ ಹಾಸ್ಯ ಚುಟುಕುಗಳನ್ನು, ಉತ್ತಮ ಕವಿತೆಗಳನ್ನು ಹೇಳುತ್ತಾ ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು.

ತದನಂತರ ರಜಕ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ದತ್ತು ನಿಧಿ ವಿತರಣಾ ಸಮಾರಂಭವನ್ನು ಶ್ರೀ ರಜಕ ಸಂಘದ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಪ್ರಾಂತೀಯ ಅಧ್ಯಕ್ಷರು ಹಾಗೂ ಎಲ್ಲಾ ಪದಾದಿಕಾರಿಗಳು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು.

ರಜಕ ಸಂಘದ ಅಧ್ಯಕ್ಷ ದಾಸು ಸಿ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಪದಾದಿಕಾರಿಗಳು ಮತ್ತು ಮಹಿಳಾ ಪದಾದಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ಎಸ್.ಸಾಲ್ಯಾನ್, ಮಹಿಳಾ ಕಾರ್ಯಧ್ಯಕ್ಷೆ ಪ್ರವಿಣ್ ಕುಂದರ್, ಗೌರವ ಕಾರ್ಯದರ್ಶಿ ಸುಮಿತ್ರ ಆರ್.ಪಲಿಮಾರ್ ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಕಾರ್ಯ ಮಾಡಿದರು. ಸಾಂಸ್ಕೃತಿಕ ವಿಭಾಗದ ಉಪಾಧ್ಯಕ್ಷ ಶಶಿಧರ್ ಸಾಲ್ಯಾನ್ ಧನ್ಯವಾದ ಕಾರ್ಯಕ್ರಮ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಹಾಗೂ ಪ್ರಾಂತೀಯ ವಿಭಾಗದ ಕಾರ್ಯಕರ್ತರುಗಳಾದ ಶ್ರೀಮತಿ ಸುಮಿತ್ರಾ ಸಾಲ್ಯಾನ್, ವಿಜಯ್ ಕುಂದರ್, ಪ್ರಕಾಶ್ ಗುಜರನ್ನ, ಸಂಜೀವ ಸಾಲ್ಯಾನ್, ಜಯ ಕುಂದರ್, ಸುಂದರ್ ಎಚ್.ಎಮ್. ಸುಭಾಶ್ ಸಾಲ್ಯಾನ್, ಪ್ರಭಾಕರ್ ಸಾಲ್ಯಾನ್, ಡಿ.ಆರ್. ಸಾಲ್ಯಾನ್, ಕಿರಣ್ ಕುಂದರ್, ಸತೀಶ್ ಸಾಲ್ಯಾನ್, ಜಯ ಮಡಿವಾಳ್, ಸುರೇಶ್ ಸಾಲ್ಯಾನ್, ಪಾಂಡು ಮಡಿವಾಳ, ಸಂಜೀವ ಎಕ್ಕಾರ್ ಹಾಗೂ ಇತರರು ಸ್ವಭಾಷೆಯ ಬಂಧುಗಳೆಲ್ಲರೂ ತುಂಬು ಹೃದಯದ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here