Tuesday, October 17, 2023

’ಸದೃಢವಾದ ದೇಹಾರೋಗ್ಯ ಸುಖ ನೆಮ್ಮದಿಗೆ ಮೂಲ’: ಅಶೋಕ್ ಕುಮಾರ್

Must read

ವಿಟ್ಲ: ಯಾರು ದೈಹಿಕವಾಗಿ ಸಮರ್ಥರಾಗಿರುತ್ತಾರೋ ಅವರು ಮಾನಸಿಕವಾಗಿ ನೆಮ್ಮದಿಯನ್ನು ಹೊಂದಿರುತ್ತಾರೆ. ಆರೋಗ್ಯಕರ ಜೀವನಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕವಾಗುತ್ತದೆ. ತಾಳ್ಮೆಯ, ಪರಿಣತ ತರಬೇತುದಾರರಿಂದ ವಿದ್ಯಾರ್ಥಿಯ ಯಶಸ್ಸು ಸಾಧ್ಯ ಎಂದು ಸಾಣೂರು ಪ್ರಕೃತಿ ಸಮೂಹ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಅಶೋಕ್ ಕುಮಾರ್ ಅವರು ಹೇಳಿದರು.
ಅವರು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಆರಂಭವಾದ ಹಾಗೂ ತಾವೇ ಕೊಡುಗೆಯಾಗಿ ನೀಡಿದ ಮಲ್ಟಿ ಜಿಮ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಐ.ಎಸ್.ಒ ನ ಕನ್ಸಲ್ಟೆಂಟ್ ಮನೋಹರ ಪ್ರಭು, ಸಂಸ್ಥೆಯ ಸಂಚಾಲಕ ಎಲ್.ಎನ್ ಕೂಡೂರು, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರಾದ ಬಾಬು ಕೆ.ವಿ, ಪದ್ಮಯ್ಯ ಗೌಡ, ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಮೂಡುಬಿದಿರೆಯ ಜಿಮ್ ತರಬೇತುದಾರ ವಿಜಯ್, ವಿಟ್ಲ ಸುಪ್ರಜಿತ್ ಐಟಿಐನ ಕಾರ್‍ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ನಿವೃತ್ತ ಪ್ರಿನ್ಸಿಪಾಲ್ ರಘುರಾಮ್ ಶಾಸ್ತ್ರಿ ಉಪಸ್ಥಿತರಿದ್ದರು.

More articles

Latest article