ಮಿತ್ತೂರು: ನೆಟ್ಲ ಮಡ್ನೂರು ಗ್ರಾಮದ ಪರ್ಲೊಟ್ಟುನಲ್ಲಿ ಶೌಚಾಲಯದ ಗುಂಡಿಗೆ ಬಿದ್ದು ಒರ್ವ ವ್ಯಕ್ತಿ ಮೃತ ಪಟ್ಟ ಘಟನೆ ಇಂದು ಬೆಳಿಗೆ ನಡೆದಿದೆ. ಹಳೆಯ ಶೌಚಾಲಯದ ಮೇಲೆ ಜೆಸಿಬಿ ಚಾಲಕ ತಿಳಿಯದೆ ನಡೆದುಕೊಂದು ಹೋದಾಗ ಅದರ ಒಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಇಡ್ಕಿದು ಗ್ರಾಮದ ಬೊಳ್ಳೆರೆಮಜಲು ನಿವಾಸಿ ರಾಮ ಸಪಲ್ಯರವರ ಪುತ್ರ ರಾಜೇಶ್(38) ಮೃತ ದಿರ್ದೈವಿ. ಸ್ಥಳೀಯ ಗುತ್ತಿಗೆದಾರರೋರ್ವರ ಜೆಸಿಬಿಯಲ್ಲಿ ಕೆಲದಿನಗಳಿಂದ ಆಪರೇಟರ್‍ ಆಗಿ ಕೆಲಸ ಮಾಡುತ್ತಿದ್ದರು. ನೆಟ್ಲ ಮಡ್ನೂರು ಗ್ರಾಮದ ಪರ್ಲೋಟ್ಟು ಎಂಬಲ್ಲಿ ಕಟ್ಟಡದ ಕಾಮಗಾರಿಗಳಿಂದ ನಡೆಸುವ ಸಲುವಾಗಿ ನೆಲವನ್ನು ಸಮತಟ್ಟು ಮಾಡುವ ಕಾರ್ಯ ನಿನ್ನೆಯಿಂದ ನಡೆಯುತ್ತಿತ್ತು. ಸಾಯಂಕಾಲ ಜೆಸಿಬಿ ಯನ್ನು ಕೆಲಸದ ಸ್ಥಳದಲ್ಲಿಯೇ ನಿಲ್ಲಿಸಿ ರಾಜೇಶ್ ಮನೆಗೆ ಬಂದಿದ್ದರು. ಜು.೧೧ರಂದು ಬೆಳಿಗ್ಗೆ ಕೆಲಸ ಮುಂದುವರೆಸುವ ಸಲುವಾಗಿ ರಾಜೇಶ್ ರವರು ಮನೆಯಿಂದ ತೆರಳಿ ಕೆಲಸ ಮಾಡಲಿದ್ದ ಸ್ಥಳದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೇ ಇದ್ದ ಹಳೇ ಶೌಚಾಲಯದ ಹೊಂಡಕ್ಕೆ ಬಿದ್ದು ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳನ್ನು ಅಗಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here