ಬಂಟ್ವಾಳ : ಕಾಡು ಕೋಣವೊಂದು ರೈಲು ಬರುವ ವೇಳೆ ಓಡಿ ಹೋಗಿ ಮರದ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗು ಗಂಗೆಪಾಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 4 ವರ್ಷ ಪ್ರಾಯದ ಗಂಡು ಕಾಡುಕೋಣವೊಂದು ರೈಲು ಹಳಿಯನ್ನು ದಾಟುವ ವೇಳೆ ರೈಲಿನ ಶಬ್ದಕ್ಕೆ ಓಡಿ ಹೋಗಿ ಮರಕ್ಕೆ ಕತ್ತು ಹಾಗೂ ಕೊಂಬು ಕತ್ತು ತುಂಡಾಗಿ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.
ಸಂಜೆ ಯ ವೇಳೆ ಸ್ಥಳೀಯ ರು ಗುಡ್ಡೆಗೆ ಸೊಪ್ಪು ತರಲು ಹೋಗುವ ವೇಳೆ ಬೆಳಕಿಗೆ ಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ವಲಯ ಅರಣ್ಯ ಇಲಾಖಾ ಅಧಿಕಾರಿಗಳಾದ ಸುರೇಶ್, ಅರಣ್ಯ ವೀಕ್ಷಕರು ಜಿತೇಶ್, ಯಶೋಧರ ದಯಾನಂದ, ಕ್ಯಾತಲಿಂಗ , ಪ್ರವೀಣ್ ಮತ್ತು ಯೋಗೀಶ್ ವಾಹನ ಚಾಲಕ ಜಯರಾಮ್ ಬೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ವೈದ್ಯಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕಾಡುಕೋಣದ ಮೃತದೇಹವನ್ನು ಬೆಂಕಿಯಲ್ಲಿ ಸುಟ್ಟು ಬಳಿಕ ಮಣ್ಣಿನಲ್ಲಿ ಹೂಳಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here