ಬಂಟ್ವಾಳ: ತೆರಿಗೆಯ ಜೊತೆಗೆ ಕಸ ಸಂಗ್ರಹಣೆಗೆ ಅಡ್ವಾನ್ಸ್ ಶುಲ್ಕ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿಯವರ ಮೂಲಕ ಜಿಲ್ಲಾಧಿಕಾರಿಯವರಿಗೆ ಬುಧವಾರ ಮನವಿ ಸಲ್ಲಿಸಿತು.

ಬಂಟ್ವಾಳ ಪುರಸಭಾ ಆಡಳಿತವು ತೆರಿಗೆಯ ಜೊತೆ  ಕಸ ಸಂಗ್ರಹಣಾ ಶುಲ್ಕವನ್ನು ವಿಧಿಸಿರುವುದು ಜನವಿರೋಧಿ ಯಾಗಿದೆ.ಪುರಸಭೆಯ ಈ ಕ್ರಮದಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಸ ಸಂಗ್ರಹಣೆಯ ಸೇವೆಯನ್ನು ಬಳಸದಿರುವ ನಗರವಾಸಿಗಳಿಗೂ ತೆರಿಗೆಯ ಜೊತೆ ಕಸ ಸಂಗ್ರಹಣೆಯ ಶುಲ್ಕ ಪಾವತಿಸಲು ಒತ್ತಡ ಹೇರುವುದು ಸರಿಯಲ್ಲ ಹಾಗಾಗಿ ಈ ಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.  ಈ ಸಂದರ್ಭ ದಲ್ಲಿ  ಮಾಜಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರಾದ ಬಿ.ವಾಸು ಪೂಜಾರಿ , ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ. ಮಹಮದ್ ನಂದವರಬೆಟ್ಟು,ಜನಾರ್ಧನ ಚಂಡ್ತಿಮಾರ್,ಜಯಂತಿ ಮಣಿ,  ಗಾಯತ್ರಿ ಪ್ರಕಾಶ್,  ಜೆಸಿಂತಾ, ಸಿದ್ದಿಕ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಬೇಬಿ ಕುಂದರ್ , ಸುದೀಪ್ ಕುಮಾರ್ ಶೆಟ್ಟಿ,ಜಿಪಂ ಸದಸ್ಯ ಪದ್ಮಶೇಖರ್ ಜೈನ್ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ . ಮಲ್ಲಿಕಾ ಶೆಟ್ಟಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ , ಪಕ್ಷದ ಮುಖಂಡರಾದ ಮಾಯಿಲಪ್ಪ ಸಾಲಿಯಾನ್. ವಸಂತ್. ವಸಂತಿ ಚೆಂದಪ್ಪ,  ಜಗದೀಶ್ ಭಂಡಾರಿಬೆಟ್ಟು,ಮಲ್ಲಿಕಾ ಪಕಳ,   ವೆಂಕಪ್ಪ. ಪೂಜಾರಿ ಬಂಟ್ವಾಳ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here