Sunday, October 22, 2023

114.60 ಲಕ್ಷ.ರೂ.ಸಹಾಯಧನ ಬಿಡುಗಡೆ: ಶಾಸಕ ರಾಜೇಶ್ ನಾಯ್ಕ್

Must read

ಬಂಟ್ವಾಳ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಲ್ಲಿ 2018-19ನೇ ಸಾಲಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಯಡಿ 192 ಫಲಾನುಭವಿಗಳಿಗೆ 114.60 ಲಕ್ಷ.ರೂ.ಸಹಾಯಧನ ಬಿಡುಗಡೆಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದ್ದಾರೆ.

ಬಿ.ಸಿ.ರೋಡಿನಲ್ಲಿರುವ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ಸಂಜೆ ಶ್ರಮಶಕ್ತಿ ಯೋಜನೆಯಲ್ಲಿ ಬಿಡುಗಡೆಯಾದ 74 ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು. ಶ್ರಮಶಕ್ತಿ ಯೋಜನೆಯಲ್ಲಿ 74 ಫಲಾನುಭವಿಗಳಿಗೆ 19.50ಲಕ್ಷ,ಸ್ವಯಂ ಉದ್ಯೋಗದಡಿ 20ಫಲಾನುಭವಿಗಲಕಿಗೆ 24.50ಲಕ್ಷ , 66ಫಲಾನುಭವಿಗಳುಗೆ6.60 ಲಕ್ಷ ರೂ.ಕಿರುಸಾಲ ಹಾಗೂಗಂಗಾಕಲ್ಯಾಣದಡಿ 32ಫಲಾನುಭವಿಗಳಿಗೆ 64 ಲಕ್ಷರೂ.ಮಂಜೂರಾಗಿದೆ ಎಂದರು.   ಶಾಸಕರ ಕಾರ್ಯಾಲಯ ಸದಾ ತೆರದಿದ್ದು, ಸರಕಾರದ ಸವಲತ್ತು, ಯೋಜನೆಗಳ ಕುರಿತ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದ ಶಾಸಕರು ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ನಲ್ಲು ಮಹಿಳೆಯರ ಅಭ್ಯುದಯಕ್ಕೆ ಹಲವಾರು ಯೋಜನೆಯನ್ನು ಪ್ರಕಟಿಸಿದೆ ಎಂದರು.ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಸಫ್ವಾನ್ ಸ್ವಾಗತಿಸಿ,ವಂದಿಸಿದರು.

More articles

Latest article