ಕುಂಭಶ್ರೀ ಪದವಿ ಪೂರ್ವ ಕಾಲೇಜು ನಿಟ್ಟಡೆ ಇದರ ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್‍ಯಕ್ರಮವು ಇತ್ತೀಚೆಗೆ ಕಾಲೇಜು ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕುಂಭಶ್ರೀ ಸಂಸ್ಥೆಯ ಸಂಚಾಲಕರಾದ  ಗಿರೀಶ್ ಕೆ, ಹೆಚ್ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಹಾಗೂ ಶಿಸ್ತು ಪಾಲನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂಭಶ್ರೀ ಪದವಿ ಪೂರ್ವ ಕಾಲೇಜು ನಿಟ್ಟಡೆ ವೇಣೂರು ಇದರ ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ ಇವರು ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು.
ಕಾಲೇಜು ಮಂತ್ರಿಮಂಡಲದ ಅಧ್ಯಕ್ಷನಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸಾಗರ್ ಪ್ರಮಾಣವಚನವನ್ನು ಸ್ವೀಕರಿಸಿದರು, ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಸಹನಾ, ವಿರೋಧ ಪಕ್ಷದ ನಾಯಕಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ತೇಜಸ್ವಿನಿ , ಕ್ರೀಡಾಮಂತ್ರಿಯಾಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಸುಜೀತ್, ಶಿಸ್ತು ಪಾಲನಾ ಮಂತ್ರಿಯಾಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅಭಿಷೇಕ್, ಸಾಂಸ್ಕೃತಿಕ ಮಂತ್ರಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವನೀಶ್, ಭಾಷಾ ಮಂತ್ರಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಹರಿಣಾಕ್ಷಿ, ಶುಚಿತ್ವ ಮಂತ್ರಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪೂಜಾ ಟಿ.ಎಲ್ ಪ್ರಮಾಣ ವಚನಾ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಉಷಾ. ಜಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಅಕ್ಷತಾ, ಪೂರ್ವ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ಎಲ್. ಎನ್.ರಾವ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರೆಲ್ಲರೂ ಉಪಸ್ಥಿತರಿದ್ದರು. ಉಪನ್ಯಾಸಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ವಿಂಧ್ಯಾ ಯು. ಸ್ವಾಗತಿಸಿ, ಉಪನ್ಯಾಸಕ ಆಲ್ವಿನ್ ಡಿಸೋಜಾ ವಂದಿಸಿದರು.

ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ ನಿಟ್ಟಡೆ ವೇಣೂರು
ಶಾಲಾ ಮಂತ್ರಿಮಂಡಲ ಹಾಗೂ ವನಮಹೋತ್ಸವ ಕಾರ್ಯಕ್ರಮ 2019
ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ ನಿಟ್ಟಡೆ ವೇಣೂರು ಇಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಹಾಗೂ ವನಮಹೋತ್ಸವ ಕಾರ್ಯಕ್ರಮವು 9ನೇ ತರಗತಿಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಜರಗಿತು.ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ವೆಂಕಟೇಶ್ ತುಳುಪುಳೆ ಉಪಪ್ರಾಂಶುಪಾಲರು, ಸರಕಾರಿ ಜೂನಿಯರ್ ಕಾಲೇಜು ವೇಣೂರು. ಇವರು ಉದ್ಘಾಟಿಸಿದರು, ನಂತರ ಶಾಲಾ ಮಂತ್ರಿಮಂಡಲದ ಪ್ರಾಮುಖ್ಯತೆ ಹಾಗೂ ಕರ್ತವ್ಯಗಳ ಬಗ್ಗೆ ತಿಳಿಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ  ಗಿರೀಶ್ ಕೆ.ಹೆಚ್ ರವರು ಮನುಷ್ಯನ ಜೀವನದಲ್ಲಿ ಪರಿಸರದ ಪ್ರಾಮುಖ್ಯತೆ ಹಾಗೂ ತಾಳ್ಮೆ, ಆಲಿಸುವ ಗುಣ ಅತೀ ಅವಶ್ಯಕ ಎಂದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಉಷಾ. ಜಿ ರವರು ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ  ಅಕ್ಷತಾ ರವರು ವಂದನಾರ್ಪಣೆ ಗೈದರು. ಕಾರ್ಯಕ್ರಮದ ಕೊನೆಯಲ್ಲಿ ಗಿಡ ನೆಡುವ ಕಾರ್ಯಕ್ರಮವು ಜರುಗಿತು. ಶಿಕ್ಷಕಿಯರಾದ ಅಪರ್ಣ ಹಾಗೂ ಸವಿತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here