ವಿಟ್ಲ: ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಹಾಗೂ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲುರವರ ನೇತೃತ್ವದ ನಿಯೋಗ ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಕಚೇರಿಗೆ ಭೇಟಿ ನೀಡಿದ ಕೊಳ್ನಾಡು ಗ್ರಾಮಕ್ಕೆ ಕನ್ಯಾನದಿಂದ ಸಂಪರ್ಕ ಕಲ್ಪಿಸುವ ಕೆ.ಎಸ್.ಆರ್.ಟಿ.ಸಿ.ಬಸ್ಸು ಸೌಕರ್‍ಯ ಒದಗಿಸಲು ಮನವಿ ಮುಖಾಂತರ ಒತ್ತಾಯಿಸಿದರು ಮತ್ತು ಈ ಹಿಂದೆ ಗ್ರಾಮ ಸಭೆಯಲ್ಲಿ ಸಲ್ಲಿಸಿದ ಬೇಡಿಕೆ ಮಂಗಳೂರು, ಮುಡಿಪು, ಸಾಲೆತ್ತೂರು ಮೂಲಕ ಪುತ್ತೂರು ಸಾಗುವ ಬಸ್ಸು ಒದಗಿಸುವ ಬೇಡಿಕೆಯ ಪ್ರಗತಿ ಬಗ್ಗೆ ತಿಳಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಶೀಘ್ರದಲ್ಲಿ ಪ್ರಾಧಿಕಾರದಿಂದ ಪರವಾನಿಗೆ ದೊರಕಲಿದೆ. ಅನಂತರ ಬಸ್ಸು ಸೌಕರ್ಯ ಒದಗಿಸಲಾಗುವುದು ಮತ್ತು ಸದ್ರಿ ಮನವಿಯಲ್ಲಿರುವ ಕರೋಪಾಡಿ ಕನ್ಯಾನ ಕುಡ್ತಮುಗೇರು ಸೆರ್ಕಳ ಕಲ್ಲಡ್ಕ ಬಿ.ಸಿರೋಡ್ ಹಾಗೂ ಕರೋಪಾಡಿ ಕನ್ಯಾನ ಕುಳಾಲು ಸಾಲೆತ್ತೂರು ಮಂಚಿ ಬಿ.ಸಿರೋಡ್ ಹೊಸ ಮಾರ್ಗ ಅಲ್ಲದೆ ಈಗಾಗಲೇ ಇರುವ ಕೋಡಪದವು ಶರವು ಮದಕ ಬಸ್ಸನ್ನು ತಾಳಿತ್ತನೂಜಿಯವರೆಗೆ ವಿಸ್ತರಿಸುವುದಲ್ಲದೇ ಕೋಡಪದವು ಮಜ್ಜೋನಿ ಕುಡ್ತಮುಗೇರು ಬಸ್ಸು ರದ್ದಾಗಿರುವುದನ್ನು ಪುನರಾರಂಭಿಸುವುದಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ಪವಿತ್ರ ಪೂಂಜ, ಟಿ. ಯೂಸುಫ್ ಉಪಸ್ಥಿತರಿದ್ದರು.


