ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ಕಾವ್ಯ ಕಮ್ಮಟ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಪ್ರಿನ್ಸಿಪಾಲ್ ಅನಂತಕೃಷ್ಣ ಪದ್ಯ ರಚನೆ ಮತ್ತು ಪುಸ್ತಕಗಳ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಉಪನ್ಯಾಸಕರುಗಳಾದ ಅಣ್ಣಪ್ಪ ಸಾಸ್ತಾನ, ವಿಶ್ವಕುಮಾರಿ ರೈ ಪಿ.ಎನ್, ರಕ್ಷಿತಾ ರೈ, ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಎನ್.ಭರತ್ ಕುಮಾರ್ ಸ್ವಾಗತಿಸಿದರು. ಇಂದಿರಾ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here