Friday, April 5, 2024

*ನಾನು ಯೋಧ*

ಅಗಲಿದ ವೀರ ಯೋಧರಿಗೆ ವೀರಾಂಜಲಿ!
ಸೇನೆಯಲಿ ಜೀವದ ಹಂಗು ತೊರೆದು
ಹೋರಾಡಿದ ಯೋಧರಿಗೆ ಅರ್ಪಣೆ!
(ನನ್ನ’ಕಟ್ಟಿರುವೆ ಸಾಲು’ಸಂಕಲನದ ಕವನ)

*ನಾನು ಯೋಧ*

ಬಾಣ ಬಿರುಸು
ಗಳೊಂದು ನಾಟವು
ಗಟ್ಟಿ ಎದೆಯೆನದು
ಸೋಲದಿರುವುದೆ
ಎನ್ನ ಗರಿಮೆಯು
ದಿಟ್ಟ ನಿಲುವೆನದು

ಉದಿತ ಮಾರ್ಗವು
ವಿದಿತವೆಲ್ಲವು
ಜಟ್ಟಿ ತನುವೆನದು
ಕುದಿವ ಬಿಂದುವ
ನೊದವಿ ಸಾಗುವ
ನೆಟ್ಟ ಮನವೆನದು

ತೇಲು ಬಾಣವ
ಕೈಲಿ ಹಿಡಿಯುವ
ಶೂರ ಪಡೆಯೆನದು
ಹಾರು ಹಕ್ಯಿಯ
ಪುಕ್ಕ ಎಣಿಸುವ
ಧೀರ ನಡೆಯೆನದು

ಬೆಳ್ಳಿ ಚುಕ್ಕಿಯ
ಅಂಗೈಲಿ ಧರಿಸುವ
ಭವ್ಯ ಬಲವೆನದು
ಹಿಮಾಲಯವ
ಮುಂಗೈಲಿ ಭರಿಸುವ
ದಿವ್ಯ ಛಲವೆನದು

ಸಾವ ಸಿರಿಯನೆ
ಕೊಳ್ಳೆ ಹೊಡೆಯುವ
ಪರಮ ಗುರಿಯೆನದು
ಮತ್ತೆ ಈ ಮಣ್ಣಲಿ
ಜನ್ಮ ತಳೆಯುವ
ಪುಣ್ಯ ಸಿರಿಯೆನದು

 

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....