ಕಲ್ಲಡ್ಕ: ಶ್ರೀರಾಮ ಪದವಿಪೂರ್ವ ಕಾಲೇಜು, ಕಲ್ಲಡ್ಕದಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು.

ವಿವಿಧ ಗುಂಪುಗಳಲ್ಲಿ ಕಾರ್ಗಿಲ್ ಯುದ್ಧದ ಕುರಿತು ಮಾಹಿತಿಯುಳ್ಳ ವಿಡಿಯೋಗಳನ್ನು ತೋರಿಸಲಾಯಿತು.

ಕಲ್ಲಡ್ಕ: ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಪ್ರಭಾಸ ಮಾನವಿಕ ಸಂಘವು ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪನಮನ ಸಲ್ಲಿಸಿ 20ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿತು.

ಕಾರ್ಗಿಲ್‌ಗೆ ರಣಹೇಡಿಗಳಂತೆ ನುಸುಳಿ ಕುಳಿತಿದ್ದ ಪಾಕಿಸ್ತಾನಿಗಳ ವಿರುದ್ಧ ಸಮರ ಸಾರಿ ಭಾರತಕ್ಕೆ ವಿಜಯವನ್ನು ತಂದ ದಿನ ಜುಲೈ26. ಇಡೀ ಜಗತ್ತಿನ ಮುಂದೆ ಪಾಕಿಸ್ತಾನದ ನೈಜ ಮುಖ ಅರಿವಾದ ದಿನ. ವರ್ಷದಲ್ಲಿ ಒಂದು ದಿನ ಇಂತಹ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಕಾಲೇಜ್ ವಿದ್ಯಾರ್ಥಿ ಪ್ರಮುಖ್ ಗಣೇಶ್ ಇವರು ಕಾರ್ಗಿಲ್ ಯೋಧರಿಗೆ ನುಡಿನಮನವನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟೆ, ಮಾನವಿಕ ಸಂಘದ ನಿರ್ದೇಶಕರಾದ  ಶುಭಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವರ್ಷಿಣಿ ಸ್ವಾಗತಿಸಿ,  ನಿಶಾ ವಂದಿಸಿ,  ದುರ್ಗಾಶ್ರೀ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here