ಮುಂಬಯಿ (ಉಜಿರೆ): ಅಜ್ಞಾನದಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಸುಗಂಧವನ್ನು ಪಸರಿಸಿ ಜೀವನದಲ್ಲಿಉನ್ನತ ಸಾಧನೆ ಮಾಡಲು ಮಾರ್ಗದರ್ಶನ ನೀಡುವಾತ ನೇಗುರು. ಗುರುಪೂರ್ಣಿಮೆ ಧರ್ಮಜಾಗೃತಿ ಮಾಡುವ ಪರ್ವವಾಗಿದೆ ಎಂದು ಕನ್ಯಾಡಿ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಗುರುಪೂರ್ಣಿಮೆ ಅಂಗವಾಗಿ ಮಂಗಳವಾರ ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ರಾಮಕ್ಷೇತ್ರದಲ್ಲಿ ಪಾದ ಪೂಜೆ, ಗುರುವಂದನೆ ಬಳಿಕ ಅವರು ಆಶೀರ್ವಚನ ನೀಡಿದರು.

ಎಲ್ಲರ ಆತ್ಮನೂ ಪರಮಾತ್ಮನ ಅಂಗವಾಗಿದ್ದು ಪರಿಶುದ್ಧ ಮನಸ್ಸಿನಿಂದ ಮಾಡಿದ ಜಪ, ತಪ, ಧ್ಯಾನದಿಂದ ಆತ್ಮನೇ ಪರಮಾತ್ಮನಾಗಬಲ್ಲ. ಮಾನವನೇ ಮಾಧವನಾಗುತ್ತಾನೆ ಎಂದು ಹೇಳಿದರು. ಪಂಚೇಂದ್ರಿಯಗಳನ್ನು ನಿಯಂತ್ರಿಸಿ ಮನಸ್ಸಿಗೆ ವೈರಾಗ್ಯ ಬಂದಾಗ ಸತ್ಯದ ಅರಿವು ನಮಗಾಗುತ್ತದೆ. ಪ್ರಕೃತಿಯೇ ನಮ್ಮಗುರು. ಸ್ವಧರ್ಮದ ಪಾಲನೆ ಮಾಡಿ, ಅಚಲವಾದ ಆತ್ಮವಿಶ್ವಾಸದಿಂದ ಸ್ವಾಧ್ಯಾಯ ಹಾಗೂ ಆಧ್ಯಾತ್ಮ ಚಿಂತನೆಯಿಂದ ಲೋಕ ಕಲ್ಯಾಣವಾಗುತ್ತದೆ. ದಿನದಲ್ಲಿ ಸ್ವಲ್ಪ ಸಮಯವಾದರೂ ಆಧ್ಯಾತ್ಮಚಿಂತನೆಗೆ ಮೀಸಲಿಡಬೇಕು. ವಿದ್ಯಾಥಿಗಳು ಅಧ್ಯಯನಶೀಲರಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಭಕ್ತರಿಂದ ಭಜನೆ, ಪ್ರಾರ್ಥನೆ, ನವಗ್ರಹ ಶಾಂತಿ, ಹೋಮ, ಸ್ವಾಮೀಜಿಯವರ ಪಾದಪೂಜೆ, ಕಿರೀಟಧಾರಣೆ ಮೊದಲಾದ ಕಾರ್ಯಕ್ರಮಗಳು ನಡೆದವು.

ಮೂಡಬಿದ್ರೆಯ ಜೋತಿಷಿ ವೆಂಕಟೇಶಕಿಣಿ ಮಾತನಾಡಿ ಗುರು ಪೂರ್ಣಿಮೆಯ ಆಚರಣೆಯ ಮಹತ್ವವನ್ನು ವಿವರಿಸಿದರು. ಸುಜಿತಾ ವಿ.ಬಂಗೇರ, ಪೀತಾಂಬರ ಹೇರಾಜೆ, ಚಿತ್ತರಂಜನ್ ಗರೋಡಿ, ಜಯಂತ ಕೋಟ್ಯಾನ್, ಬೆಳಾಲು ತಿಮ್ಮಪ್ಪ ಗೌಡ, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಪ್ರೊ| ಕೇಶವ ಬಂಗೇರ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here