ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇದರ ಶೈಕ್ಷಣಿಕ ವರ್ಷ 2019-20 ನೇ ಸಾಲಿನ ಶಾಲಾ ಸಂಸತ್ತು ಅಧಿವೇಶನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್‍ಯಕ್ರಮವು ಜು.11ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಅಗ್ನಿ ಹೋತ್ರ ಹಾಗೂ ಸರಸ್ವತಿ ವಂದನೆ ಮೂಲಕ ಆರಂಭಿಸಲಾಯಿತು.
ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷರು, ಎಸ್.ಸಿ – ಎಸ್.ಟಿ ಯುವ ಮೋರ್ಚಾದ ಅಧ್ಯಕ್ಷರಾದ ದಿನೇಶ್ ಅಮ್ಟೂರು ಮಾತನಾಡಿ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನ ಪಾತ್ರ ಬಹುಮುಖ್ಯ. ಸಂವಿಧಾನವೆಂಬುದು ದೇಶದ ಧರ್ಮಗ್ರಂಥ. ನಾಯಕತ್ವದ ಅರಿವು ಮೂಡಿಸಲು ಈ ಶಾಲಾ ಸಂಸತ್ತು ರಚನೆಯಾಗುತ್ತದೆ. ಶಾಲೆಯು, ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸುವ ಕೊಂಡಿಯಾಗಿದೆ. ಈ ಕೊಂಡಿಗಳು ಕಲ್ಲಡ್ಕದಿಂದ ಹಿಡಿದು ಎಲ್ಲಾ ರಾಜ್ಯ ರಾಷ್ಟ್ರಗಳಲ್ಲಿ ಹೊರಹೊಮ್ಮುವಂತಾಗಲಿ ಎಂದು ತನ್ನ ಶಾಲಾ ದಿನವನ್ನು ನೆನಪಿಸುತ್ತಾ ಶುಭಹಾರೈಸಿದರು.

ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ರಾಜೇಶ್ವರಿ ಪ್ರಮಾಣವಚನವನ್ನು ಬೋಧಿಸಿದರು. ನಂತರ ವಿವಿಧ ಸಂಘಗಳ ಉದ್ಘಾಟನೆಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠ್ಠಲ್ ನಾಯ್ಕ್ ನೆರವೇರಿಸಿದರು.
ಶಾಲಾ ನಾಯಕನಾಗಿ 7ನೇ ತರಗತಿಯ ದೀಕ್ಷಿತ್, ಗೃಹಮಂತ್ರಿಯಾಗಿ ಶ್ರಮಿಕಾ, ಕೃಷಿ ಸಚಿವರಾಗಿ ಶ್ರೀಜನ್ಯ ಹಾಗೂ ಹೇಮಂತ್, ನೀರಾವರಿ ಸಚಿವರಾಗಿ ಭುವನ್, ಸಾಂಸ್ಕೃತಿಕ ಮಂತ್ರಿಯಾಗಿ ಮನಸ್ವಿ ಹಾಗೂ ನಿಖಿತಾ, ಕ್ರೀಡಾಮಂತ್ರಿಯಾಗಿ ರೋಹಿತ್, ಆರೋಗ್ಯಮಂತ್ರಿಯಾಗಿ ತ್ರಿಶಾ ಅತಿಕಾರಿ, ಸ್ವಚ್ಛತಾ ಮಂತ್ರಿಯಾಗಿ ಜೀವಿತ್ ಮತ್ತು ಧನುಷ್, ಶಿಕ್ಷಣ ಮಂತ್ರಿಯಾಗಿ ಶ್ರೀನಿವಾಸ ಮತ್ತು ಅನನ್ಯ, ವಾರ್ತಾಸಚಿವರಾಗಿ ತಿಲಕ್ ಮತ್ತು ಅನುಷಾ, ಸಭಾಪತಿಯಾಗಿ ಕುಶಿ ಪೂಜಾರಿ, ವಿರೋಧ ಪಕ್ಷದ ನಾಯಕನಾಗಿ ಕೆ.ಧನುಷ್ ಕೆ ಜಿ ಮಾಸ್ಟರ್ ಇವರು ಪ್ರಮಾಣವಚನ ಸ್ವೀಕರಿಸಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀಗೋಪಾಲಾಚಾರ್, ಕುಲ್ಯಾರು ನಾರಾಯಣ ಶೆಟ್ಟಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠ್ಠಲ್ ನಾಯ್ಕ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಸುಧನ್ವ ಶಾಸ್ತ್ರೀ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಸುಮಂತ್ ಆಳ್ವ ನಿರೂಪಿಸಿ, ವೇದಾವತಿ ಸ್ವಾಗತಿಸಿ ರೇಷ್ಮಾ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here