


ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಕ್ಕೆ ಪ್ರಧಾನಿ ಮೋದಿಯವರ ಸಹೋದರ ಸೋಮ ಭಾಯಿ ದಾಮೋದರ ದಾಸ ಮೋದಿ ಇಂದು ಮಧ್ಯಾಹ್ನ 2.30ರ ವೇಳೆಗೆ ಆಗಮಿಸಿದ್ದಾರೆ.
ನೇರವಾಗಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಅವರು ಕೆಲ ಹೊತ್ತು ಶಾಲಾ ಸಂಚಾಲಕ ಡಾ| ಪ್ರಭಾಕರ ಭಟ್ ಅವರ ಜೊತೆ ಮಾತುಕತೆ ನಡೆಸಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಕೆಲ ಕ್ಷಣಗಳನ್ನು ಕಳೆದರು. ಮಕ್ಕಳ ಶೈಕ್ಷಣಿಕ ಮಾದರಿ ಹಾಗೂ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಭೇಷ್ ಅಂದರು.


