ಇಡ್ಕಿದು: ಶಾಸಕರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಗ್ರಾಮ ಪಂಚಾಯಿತಿ ಸದಸ್ಯರೆಲ್ಲರ ಒಗ್ಗೂಡುವಿಕೆಯಿಂದ, ಗ್ರಾಮಸ್ಥರ ಸಹಕಾರದೊಂದಿಗೆ ಅಭಿವೃದ್ದಿ ಕಾರ್‍ಯಗಳನ್ನು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಇಡ್ಕಿದು ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿರುವುದು ಶ್ಲಾಘನೀಯ . ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ನೋಂದಾಯಿತ ಉದ್ಯೋಗ ಚೀಟಿ ಹೊಂದಿರುವ ಅಕುಶಲ ಕಾರ್ಮಿಕರನ್ನು ಬಳಸಿಕೊಂಡು ಗುಣಮಟ್ಟದ ಕಾಮಗಾರಿಗಳು ನಡೆದಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಇಡ್ಕಿದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಾಂಡೇಲು ಮುದಸಲೆಗುಂಡಿ ಕಿರುಸೇತುವೆ, ಏಮಾಜೆ ಪ.ಜಾ.ಕಾಲನಿ ನೀರು ಸರಬರಾಜು ಯೋಜನೆ ಮತ್ತು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಗೆ ಹೆಚ್ಚುವರಿ ಕಟ್ಟಡಕ್ಕೆ ಅನುದಾನವನ್ನು ಒದಗಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸುಮಾರು 20 ವರ್ಷಗಳಿಂದ ಬಂಟ್ವಾಳ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಕಿರಿಯ ಇಂಜಿನಿಯರಾದ ಪದ್ಮರಾಜ ಗೌಡ, ಅಂಗನವಾಡಿ ಕಾಮಗಾರಿಯ ಮೇಲುಸ್ತುವಾರಿ ವಹಿಸಿದ ಮಾರ್ಷಲ್ ಪಾಯಸ್ ಕೆದಿಲ, ದಯಾನಂದ ಖಂಡಿಗ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಂ.ಅಧ್ಯಕ್ಷರಾದ ಚಂದ್ರಾವತಿ, ಜಿ.ಪಂ.ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪಂ.ಸದಸ್ಯರಾದ ಜಯಶ್ರೀ ಕೋಡಂದೂರು, ತಾ.ಪಂ.ಸದಸ್ಯೆ ವನಜಾಕ್ಷಿ ಎಸ್.ಭಟ್, ಕಾರ್‍ಯನಿರ್ವಹಣ ಅಧಿಕಾರಿ ರಾಜಣ್ಣ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾ ಜೋಷಿ, ಕಿರಿಯ ಇಂಜಿನಿಯರ ಪದ್ಮರಾಜ ಗೌಡ, ಅಂಗನವಾಡಿ ಮೇಲ್ವಿಚಾರಕಿ ಸೋಮಕ್ಕ, ಪುತ್ತೂರು ತಾಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಸದಸ್ಯರುಗಳಾದ ಜಯರಾಮ ಕಾರ್‍ಯಾಡಿಗುತ್ತು, ಚಿದಾನಂದ ಪೆಲತ್ತಿಂಜ, ಸತೀಶ್ ಕೆಂರ್ದೆಲು, ಕೇಶವ ಯು, ಹಿಮಾಕರ ಗಾಣಿಗ, ವಸಂತಿ, ಜಗದೀಶ್ವರಿ, ಶಾರದಾ, ಬೇಬಿ, ಆಶಾ, ಕಾರ್‍ಯದರ್ಶಿ ಅಜಿತ್ ಕುಮಾರ್, ಇಡ್ಕಿದು ಸೇ.ಸ.ಬ್ಯಾಂಕಿನ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಬೈಪದವು, ಇಡ್ಕಿದು ಸೇ.ಸ.ಬ್ಯಾಂಕಿನ ನಿರ್ದೆಶಕರಾದ ರಮೇಶ್ ಭಟ್ ಮಿತ್ತೂರು, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಸುರೇಶ್ ಮುಕ್ಕುಡ, ಪಂ.ಮಾಜಿ ಅಧ್ಯಕ್ಷರಾದ ಸುಂದರ ಗೌಡ, ಗುತ್ತಿಗೆದಾರರಾದ ಮಾರ್ಷಲ್ ಪಾಯಸ್, ಸಿಬ್ಬಂದಿವರ್ಗ, ಅಂಗನವಾಡಿ ಕಾರ್‍ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಪಂ.ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಿಡಿಒ ಗೋಕುಲ್‌ದಾಸ್ ಭಕ್ತ ವಂದಿಸಿದರು.


