ವಿಟ್ಲ: ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ ಅಂಗವಾಗಿ ಪುಣಚ ಗ್ರಾಮದಲ್ಲಿ ಸ್ವಚ್ಚತಾ ಕಾರ್‍ಯಕ್ರಮ ನಡೆಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪುಣಚ ಘಟ ಸಮಿತಿ ವತಿಯಿಂದ ಆಯೋಜಿಸಲಾದ ಪುಣಚ ಗ್ರಾಮ ಸ್ವಚ್ಛತಾ ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಸಮಾಜ ನಮ್ಮದಾಗಬೇಕು. ಯಾವಾಗ ನಾವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತೇವೆಯೋ ಅವಾಗ ನಮ್ಮ ರಾಷ್ಟ್ರ ಸ್ವಸ್ಥ ರಾಷ್ಟ್ರವಾಗಲು ಸಾಧ್ಯ ಎಂದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕಿನ ವಿಸ್ತರಣಾಧಿಕಾರಿಯಾದ ಸದಾಶಿವ ಅಳಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ವೇದಿಕೆಯಲ್ಲಿ ಒಡಿಯೂರು ಶ್ರೀ ವಿದ್ಯಾಪೀಠದ ಶಿಕ್ಷಕರಾದ ಶರತ್ ಆಳ್ವ, ಪುಣಚ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಹರ್ಷ ಶಾಸ್ತ್ರಿ, ಗ್ರಾಮ ಸಂಯೋಜಕಿ ಲೀಲಾ ಕೆ, ಘಟಸಮಿತಿ ಅಧ್ಯಕ್ಷರಾದ ಉಮಾ ರೈ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಕುಸುಮ, ವಿಜಯ ಆಶಯ ಗೀತೆ ಹಾಡಿದರು. ನಿಕಟಪೂರ್ವ ಸಂಘಟನಾ ಕಾರ್‍ಯದರ್ಶಿ ಪುರಂದರರವರು ಸ್ವಾಗತಿಸಿದರು. ಗುಂಪಿನ ಸದಸ್ಯೆ ಜಲಜಾಕ್ಷಿಯವರು ವಂದಿಸಿದರು. ನಿಕಟಪೂರ್ವ ಘಟಸಮಿತಿ ಅಧ್ಯಕ್ಷರಾದ ರಾಜೇಂದ್ರ ರೈಯವರು ಕಾರ್‍ಯಕ್ರಮ ನಿರೂಪಿಸಿದರು.
ಪುಣಚ ಗ್ರಾಮದ ಸೇವಾದೀಕ್ಷಿತೆ ಗೀತಾ, ಲೆಕ್ಕಪರಿಶೋಧಕಿ ರೇಶ್ಮಾ, ಸೇವಾದೀಕ್ಷಿತರಾದ ಶಶಿಪ್ರಭಾ, ಗುಲಾಬಿ, ಘಟಸಮಿತಿ ಪದಾಧಿಕಾರಿಗಳು, ಗುಂಪಿನ ಸದಸ್ಯರು, ಶಾಲಾಮಕ್ಕಳು ಸಹಕರಿಸಿದರು.


