Friday, April 5, 2024

ಬುರೂಜ್ : ಸ್ಕೌಟ್ಸ್ – ಗೈಡ್ಸ್ ಪ್ರಶಸ್ತಿ ಪ್ರಧಾನ

ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ವಾಮದಪದವು ಸ್ಥಳೀಯ ಸಂಸ್ಥೆಯು ಸ್ಕೌಟ್ಸ್ ಗೈಡ್ಸ್ಸ್‌ಗಳಿಗೆ ನಡೆಸಿದ ದ್ವಿತೀಯ ಸೋಪಾನ ಪರೀಕ್ಷೆಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರು ಉಪಸ್ಥಿತರಿದ್ದು ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ನಡೆಸುವ ಮುಂದಿನ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹಾಜರಾಗಬೇಕೆಂದು ಶುಭಹಾರೈಸಿದರು. ಜನಾಬ್ ಶೇಕ್ ರಹ್ಮತ್ತುಲ್ಲಾ ಸಂಚಾಲಕರು, ಶಾಲಾ ಮುಖ್ಯಶಿಕ್ಷಕಿ, ಸ್ಕೌಟ್ ಮಾಸ್ಟರ್ ಆದ ಜಯಶ್ರೀ ಸಾಲ್ಯಾನ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಆದ ಶೋಭಾ.ಡಿ. ಮತ್ತು ಗೈಡ್ಸ್ ಕ್ಯಾಪ್ಟನ್ ವನಿತಾ ಶೆಟ್ಟಿ ಉಪಸ್ಥಿತರಿದ್ದರು.

ಉತ್ತೀರ್ಣಗೊಂಡ ವಿದ್ಯಾರ್ಥಿಗಳು : ಸ್ಕೌಟ್ಸ್: ಶೇಕ್ ಸಫ್ವಾನ್, ರಕ್ಷಣ್ ಆರ್ ಅಡಪ, ಸಂಪ್ರೀತ್, ಶೇಕ್ ಅಬ್ದುಲ್ ರಾಶಿಕ್, ಮೊಹಮ್ಮದ್ ಅಜರ್, ಅಬುಸೂಫಿಯನ್, ಮೊಹಮ್ಮದ್ ಅಕ್ರಂ, ಶೇಕ್ ಮೊಹಮ್ಮದ್ ತಾಜುದ್ದೀನ್, ಮೊಹಮ್ಮದ್ ಹಸೀಬ್, ದಿಶಾಂತ್, ಆಶಿಸ್, ವಿಶ್ವಾಸ್ ಶೆಟ್ಟಿ, ಮೊಹಮ್ಮದ್ ಶರೀಖ್, ಮೊಹಮ್ಮದ್ ಇಫಾಝ್ ಮತ್ತು ಮೊಹಮ್ಮದ್ ಇರ್ಶಾನ್.

ಗೈಡ್ಸ್ : ಫಾತಿಮಾ ರಿಝಾ, ತಸ್ನೀಯಾ, ಮೊಹ್ಸಿನಾ ಬಾನು, ಅಂಬ್ರೀನ್ ಬಾನು, ಮುಬೀನತುಲ್ ಅಸ್ಮಿಯಾ, ಫಾತಿಮಾ ಅಝ್ಮಿಯಾ, ಹುಝೈಫಾ ಬಾನು, ವೀಕ್ಷಾ, ಫಾತಿಮಾ ಝುಹಾ, ಫಮಾ ಝಬೀನ್, ಅಮೀನತುಲ್ ಝಕೀಯ್ಯಾ, ಸಾನಿಯಾ ಬೇಗಂ, ನಾಝಿಯಾ ಬಾನು, ನಫ್ರೀನಾ ಮತ್ತು ಶಹೀಮಾ.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...