Wednesday, October 25, 2023

ಒಳಚರಂಡಿ ವ್ಯವಸ್ಥೆ ಸರಿಯಾಗದಿದ್ದರೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ: ಶಾಸಕ ರಾಜೇಶ್ ನಾಯ್ಕ್

Must read

ಬಂಟ್ವಾಳ: ಜನರ ಜೀವನದಲ್ಲಿ ಆಟವಾಡಬೇಡಿ, ನನಗೆ ಜನರ ಆರೋಗ್ಯ ಮುಖ್ಯ, ಈ ವಿಷಯದಲ್ಲಿ ರಾಜಿ ಮಾಡುವುದಿಲ್ಲ, ನದಿಗೆ ಹೋಗುವ ಚರಂಡಿ ನೀರು ನಿಲ್ಲಿಸಿದಿದ್ದರೆ ನಿಮ್ಮ ಮೇಲೆ ಕ್ರಮತೆಗೆದುಕೊಳ್ಳಲು ಮುಂದಾಗುತ್ತೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಒಳಚರಂಡಿ ಯೋಜನೆ ಗೆ 56 ಕೋಟಿ ಬಿಡುಗಡೆಯಾಗಿದೆ ಹೇಳುತ್ತೀರಿ ಯಾಕೆ ಕೆಲಸ ಮಾಡದೆ ಕೂತುಕೊಂಡಿದ್ದೀರಿ.

25 ಕಡೆಗಳಲ್ಲಿ ಬಿ.ಸಿ.ರೋಡಿನ ಪೇಟೆಯಿಂದ ಕಲುಷಿತ ಚರಂಡಿ ನೀರು ನೇರವಾಗಿ ನೇತ್ರಾವತಿ ನದಿಗೆ ಹೋಗುತ್ತಿದೆ.
ಈ ಬಗ್ಗೆ ಎಲ್ಲಾ ದಾಖಲೆ ಗಳನ್ನು ನೀಡಿದ್ದೇನೆ ಅದರೂ ನಿಮಗೆ ಯಾಕೆ ಮನಸ್ಸು ಇಲ್ಲ ಎಂದು ಪ್ರಶ್ನಿಸಿದರು.

ಅದೇ ನೀರನ್ನು ಜಿಲ್ಲೆಯ ಜನರು ಕುಡಿಯುತ್ತಿದ್ದು, ಜನರು ಅನಾರೋಗ್ಯ ಪೀಡಿತ ರಾಗಲು ಇದು ಪ್ರಮುಖ ಕಾರಣವಾಗುತ್ತದೆ. ಹಾಗಾಗಿ ಈ ಸಮಸ್ಯೆ ಪರಿಹಾರವಾಗಲೇ ಬೇಕು.
ಲಕ್ಷ ಲಕ್ಷ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರು ಕೂಡಾ ಇದು ಬೇಡಾ ಎಂದು ಮಾಡಬಾರದು ಎಂದು ಹೇಳುವ ಇದರ ವಿರುದ್ದ ಯಾರ ಕೈ ಕೆಲಸ ಮಾಡುತ್ತಿದೆ ಹೇಳಿ ಎಂದು ಗರಂ ಆದರು.
ನಿಮಗೆ ಮಾಡಲು ಆಗದ ಕೆಲಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದಾಗಲೂ ನೀವು ಯಾಕೆ ಬೇಡ ಎಂದು ಹೇಳಿದ್ದೀರಿ.

ಕಸ ವಿಲೇವಾರಿಯ ಬಗ್ಗೆ ಏನಾಗಿದೆ ಎಂದು ಮಾಹಿತಿ ಪಡೆದುಕೊಂಡ ಶಾಸಕರು ಕಂಚಿನಡ್ಕ ಪದವಿನ ಘಟಕ ದ ಬಗ್ಗೆ ಸರಿಯಾದ ವಿವರ ಬೇಕು ಎಂದು ಪಡೆದುಕೊಂಡರು.
15 ದಿನ ನಿಮಗೆ ಕಾಲವಕಾಶ ನೀಡುತ್ತೇನೆ ಕಂಚಿನಡ್ಕ ಪದವಿ ನಲ್ಲಿ ಕಸ ವಿಲೇವಾರಿಯ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮಕೈಗೊಳ್ಳಿ.
ಟೆಂಡರ್ ಕರೆಯಬೇಡಿ ಎಂದು ಹೇಳಿದರು ಕೂಡಾ ನೀವು 1.50 ಕೋಟಿ ರೂ ಟೆಂಡರ್ ಕರೆದಿರುವ ಉದ್ದೇಶ ಏನು, ಸರಕಾರದ ಹಣ ಪೋಲು ಮಾಡುವ ಯೋಚನೆ ನಿಮ್ಮದಾ ಎಂದು ಅಧಿಕಾರಿಗಳಿಗೆ ತಿಳಿಸಿದರು.

ನೂತನ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಪರವಾನಿಗೆ ಪಡೆಯದೆ ಇರುವ ಕಟ್ಟಡಗಳಿಗೆ ಪುರಸಭೆ ಪರವಾನಿಗೆ ನೀಡಬೇಡಿ, ಒಂದು ಅನಾಹುತ ಗಳು ನಡೆದರೆ ಯಾರು ಕಾರಣ ಎಂದು ಕೇಳಿದರು.
ಪರವಾನಿಗೆ ಇಲ್ಲದ ಇರುವ ಕಟ್ಟಡಗಳಿಗೆ ಎಲ್ಲರಿಗೂ ಸಮಾನವಾಗಿ ಕ್ರಮಕೈಗೊಳ್ಳಿ, ಕಾನೂನು ಬಾಹಿರ ಕಟ್ಟಡ ಗಳಿಗೆ ನೀಡಬೇಡಿ. ರಾಜಕೀಯ ಮಾಡಬೇಡಿ ಎಂದು ಅವರು ಹೇಳಿದರು.
ಪುರಸಭೆಯ ಹಿಂಭಾಗದಲ್ಲಿ ಅಂಗನವಾಡಿ ಇದೆ ಈ ಅಂಗನವಾಡಿ ಯ ಪಕ್ಕದಲ್ಲಿ ಪುರಸಭೆ ಕಸ ರಾಶಿ ಹಾಕಿ ಅಂಗನವಾಡಿ ಮಕ್ಕಳಿಗೆ ರೋಗ ಬರುವ ಲಕ್ಷಣಗಳು ಇವೆ ಎಂದು ಸಾರ್ವಜನಿಕ ರ ಹಾಗೂ ಮಕ್ಕಳ ಪೋಷಕರ ದೂರು ಇದೆ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪುರಸಭೆಯ ಮುಖ್ಯಾಧಿಕಾರಿ ಗೆ ಕೇಳಿದರು.
ಈ ಬಗ್ಗೆ ದೂರು ನೀಡಿದರೆ ನಿಮಗೆ ಇಲ್ಲಿ ಅಂಗನವಾಡಿಗೆ ಅವಕಾಶ ನೀಡುವುದಿಲ್ಲ ಎಂದು ಅವರನ್ನು ಬೆದರಿಸುವ ಮಟ್ಟಕ್ಕೆ ಅಧಿಕಾರಿಗಳು ಮುಂದಾಗಿದ್ದೀರಿ, ಯಾಕೆ ಎಂದು ಶಾಸಕರು ಮುಖ್ಯಾಧಿಕಾರಿ ಯವರನ್ನು ತರಾಟೆಗೆ ತೆಗೆದುಕೊಂಡರು.
ನಿಮಗೆ ಬೇಕಾದ ರೀತಿಯಲ್ಲಿ ಕಸದ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಇದೆ ಎಂದು ಕೇಳಿದಾಗ, ಮುಖ್ಯಾಧಿಕಾರಿ ವಿನಾಕಾರಣ ನೀಡಿ ದಾರಿ ತಪ್ಪಿಸಲು ನೋಡಿದರು.

ತಪ್ಪು ಮಾಹಿತಿ ನೀಡಬೇಡಿ, ನನ್ನ ದಾರಿ ತಪ್ಪಿಸಲು ನೋಡಬೇಡಿ, ಎಲ್ಲ ಗೊತ್ತಿದ್ದು ಬಂದು ಇಲ್ಲಿ ಮೀಟಿಂಗ್ ಗೆ ಕೂತಕೊಂಡಿದ್ದೇನೆ ಎಂದು ಮುಖ್ಯಾಧಿಕಾರಿ ಗೆ ಖಡಕ್ ಅಗಿ ಶಾಸಕರು ವಾರ್ನಿಂಗ್.
ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆ ಏನಾಗಿದೆ, ಈ ಯೋಜನೆ ಇಡೀ ಪುರಸಭೆ ವ್ಯಾಪ್ತಿಗೆ ಬರುತ್ತದಾ , ಇದರಿಂದ ಕೆಲವರಿಗೆ ಅನ್ಯಾಯವಾಗಬಾರದು , ಹೊಸತಾಗಿ ಸರ್ವೆ ಮಾಡಿ ಈ ಯೋಜನೆ ಪುರಸಭೆಯ ಪ್ರತಿ ವ್ಯಾಪ್ತಿಯ ಜನರಿಗೆ ಪ್ರಯೋಜನ ವಾಗಬೇಕು , ಅ ದೃಷ್ಟಿಯಲ್ಲಿ ಕೆಲಸ ಮಾಡಿ ಎಂದರು.
ವಾರ್ಷಿಕ ಬಜೆಟ್ ನಲ್ಲಿ 48 ಲಕ್ಷ ರೂ ವ್ಯತ್ಯಾಸ ಕಾಣುತ್ತಿರುವ ಪುರಸಭೆಯ ಲೆಕ್ಕಾಚಾರ ದ ವಿಷಯದಲ್ಲಿ ಶಾಸಕರು ಕೇಳಿದಾಗ ಸಂಬಂಧಿಸಿದ ಅಧಿಕಾರಿ ಮಾತನಾಡದೆ ಎರಡು ಬಾರಿ ನಮೂದಾಗಿ ಲೆಕ್ಕಾಚಾರ ದಲ್ಲಿ ಗೊಂದಲ ಅಗಿದೆ ಎಂದು ಇಂಜಿನಿಯರ್ ನಡುವೆ ಮಾತನಾಡಿದಾಗ ನಿಮ್ಮ ವಿಷಯ ಅಲ್ಲ ದಾಗ ಮತ್ತೆ ಯಾಕೆ ನೀವು ಮದ್ಯೆ ಬಾಯಿ ಹಾಕುತ್ತೀರಿ ಎಂದು ಕೇಳಿದರು.
ಅ ರೀತಿಯಲ್ಲಿ ತಪ್ಪು ನಡೆದಿದೆಯಾದರೆ ಹಾಗಾದರೆ ಸಿಬ್ಬಂದಿಯನ್ನು ಹೇಗೆ ಕೆಲಸದಿಂದ ವಜಾ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಎ.ಸಿ. ರವಿಚಂದ್ರನಾಯಕ್, ಮುಖ್ಯಾಧಿಕಾರಿ ರೇಖಾ ಶೆಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article