(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ ಸಾಂತಕ್ರೂಜ್ ಅಲ್ಲಿನ ಬಿಲ್ಲವರ ಭವನದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಇಂದಿಲ್ಲಿ ಮಂಗಳವಾರ ಸಾಂಪ್ರದಾಯಿಕ ಮತ್ತು ಭಕ್ತಿಪೂರ್ವಕವಾಗಿ ಗುರುಪೂರ್ಣಿಮೆ ಸಂಭ್ರಮಿಸಲಾಯಿತು. ಬಿಲ್ಲವರ ಭವನದ ಮಂದಿರದಲ್ಲಿನ ಶ್ರೀ ನಾರಾಯಣಗುರು ಪ್ರತಿಮೆಗೆ ಪೂಜೆ ನೆರವೇರಿಸಿ, ಕೋಟಿಚೆನ್ನಯ ಮತ್ತು ಕಾಂತಬಾರೆ ಬೂದಬಾರೆ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಆರತಿ ನೆರವೇರಿಸಿ ಗುರುವರ್ಯರಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಉಪಾಧ್ಯಕ್ಷರಾದ ಶಂಕರ ಡಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಅಸೋಸಿಯೇ -ಶನ್‌ನ ಮಾಜಿ ಅಧ್ಯಕ್ಷ ಎಲ್.ವಿ ಅಮೀನ್ ಮತ್ತು ಸುಧಾ ಎಲ್.ಅಮೀನ್ ದಂಪತಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಭಾರತ್ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ್ ಜೆ.ಪೂಜಾರಿ, ಪ್ರೇಮನಾಥ್ ಪಿ. ಕೋಟ್ಯಾನ್, ಮಾಜಿ ನಿರ್ದೇಶಕ ಎನ್.ಎಂ ಸನಿಲ್, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಬಿಲ್ಲವರ ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ದೇವೇಂದ್ರ ವಿ.ಬಂಗೇರ, ಬನ್ನಂಜೆ ರವೀಂದ್ರ ಅಮೀನ್, ಜಯ ಪೂಜಾರಿ ಅಂಧೇರಿ ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಸೋಸಿಯೇಶನ್ -ನ ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ರವೀಂದ್ರ ಎ.ಶಾಂತಿ ವಿಧಿವತ್ತಾಗಿ ವಿಶೇಷ ಗುರುಪೂರ್ಣಿಮೆ ಪೂಜೆ ನೆರವೇರಿಸಿ ಮಂಗಳಾರತಿಗೈದು ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು.

ಇದೇ ಶುಭಾವಸರದಲ್ಲಿ ಗುರುಪೂರ್ಣಿಮೆಯ ಅನ್ನಸಂತಾರ್ಪಣೆಯ ಮಹಾದಾನಿಗಳಾದ ಜಯ ಸಿ.ಸುವರ್ಣ, ಎಲ್.ವಿ ಅಮೀನ್, ಗಂಗಾಧರ್ ಜೆ.ಪೂಜಾರಿ ಅವರನ್ನುಅಧ್ಯಕ್ಷ ಚಂದ್ರಶೇಖರ ಪೂಜಾರಿ ನೆರೆದ ಸಧಕ್ತರ ಸಮ್ಮುಖದಲ್ಲಿ ಸತ್ಕರಿಸಿ ಗೌರವಿಸಿದರು. ಶೇಖರ್ ಸಸಿಹಿತ್ಲು ಸಾರಥ್ಯದ ಭಕ್ತರನೇಕರ ಭಜನೆ ಮುಖೇನ ಆದಿಗೊಂಡ ವಾರ್ಷಿಕ ಗುರು ಪೂರ್ಣಿಮೆ ಸಡಗರವು ಅನ್ನಸಂತರ್ಪಣೆಯೊಂದಿಗೆ ಸಮಾಪನ ಕಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here