ಸರಕಾರಿ ಉದ್ಯೋಗವಾಗಿದ್ದರೂ ಸೇವೆ ಎಂಬಂತೆ ಭಾವಿಸಿ ಕೆಲಸ ಮಾಡುವುದರಿಂದಾಗಿ ಸಂಸ್ಥೆ ಹಾಗೂ ಸಮಾಜದಲ್ಲಿ ಗುರುತಿಸುವಂತಾಗಿದೆ. ನಮಗೆ ಅನ್ನ ನೀಡಿದ ಸಂಸ್ಥೆ ಗೆ ಯಾವತ್ತೂ  ಋಣಿ ಯಾಗಿರಬೇಕು ಎಂದು  ಬಿ ಎಸ್ ಎನ್ ಎಲ್ ನ ಬಂಟ್ವಾಳ ಮಾರ್ಕೆಟಿಂಗ್ ರಿಟೈಲ್ ಮೆನೇಜರ್ ರಾಗಿರುವ ಕಂಪ ಸದಾನಂದ ಆಳ್ವ ರವರು ವಿದಾಯ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಿರಂತರ 37 ವರ್ಷ ಗಳ ಸುದೀರ್ಘ ಸೇವೆ ಯಿಂದ ನಿವೃತ್ತರಾದ ಆಳ್ವ ರವರು ಗೋಣಿಕೊಪ್ಪಲು , ಮೂಡಬಿದ್ರೆ , ಬಂಟ್ವಾಳ ತಾಲೂಕುಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ , ಈ ಸಂದರ್ಭದಲ್ಲಿ ಕಮಲಾಕ್ಷಿ ಮಯ್ಯ , ಭಾರತಿ ಶೆಣೈ , ಹಾಗು ಪುರುಷೋತ್ತಮ ನಾಯಕ್ ರವರು ಕೂಡ ನಿವೃತ್ತರಾಗಿದ್ದು ಅವರನ್ನು ಕೂಡ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

 ಬಂಟ್ವಾಳ ಟೆಲಿಕಾಂ ರಿಕ್ರಿಯೇಷನ್ ಕ್ಲಬ್ ವತಿಯಿಂದ ಬಂಟ್ವಾಳ ಲಯನ್ಸ್ ಕ್ಲಬ್ ನಲ್ಲಿ  ನಡೆದ ವಿದಾಯ ಕೂಟ ಸಮಾರಂಭ ದ ವೇದಿಕೆಯಲ್ಲಿ   ಬಿ ಎಸ್ ಎನ್ ಎಲ್ ನ  ಡೆಪ್ಯುಟಿ ಜನರಲ್ ಮ್ಯಾನೇಜರ್ ಗಳಾದ   ವಿಷ್ಣು ಮೂರ್ತಿ ಭಟ್ , ಹಾಗೂ ವಿಜಯಲಕ್ಷ್ಮಿ ಆಚಾರ್ , ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗಳಾದ ಲೋಕೇಶ್ , ಅರುಣ್ ಮಾನ್ವಿ , ಆನಂದ ನಿವೃತ್ತ ಅಧಿಕಾರಿಗಳಾದ ವಿಠ್ಠಲ್ ಭಂಡಾರಿ , ಕೃಷ್ಣ ಶ್ಯಾಮ್ , ಬಿ ವಿ ಉಪಾಧ್ಯ , ಗಣ್ಯರುಗಳಾದ  ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಕಾರಂತ್ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಬಂಟ್ವಾಳ ಬಂಟರ ಸಂಘ ದ ಉಪಾಧ್ಯಕ್ಷ  ಕಿರಣ್ ಹೆಗ್ಡೆ , ಬಂಟ್ವಾಳ ಜನ ಜಾಗ್ರತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ , ಮಹೇಶ್ ಟ್ರಾವೆಲ್ಸ್ ಮಾಲಕರಾದ ಜಯರಾಮ್ ಶೇಕ , ಪುದು ಜಿಲ್ಲಾ ಪಂಚಾಯತ್ ಸದಸ್ಯ  ರವೀಂದ್ರ ಕಂಬಳಿ , ಬಂಟರ ಸಂಘ ಫರಂಗಿಪೇಟೆ ವಲಯ ಅಧ್ಯಕ್ಷ  ಶಶಿರಾಜ್ ಶೆಟ್ಟಿ ಕೊಳಂಬೆ , ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ , ಉದಯವಾಣಿ ವರದಿಗಾರ ರಾಜ ಬಂಟ್ವಾಳ , ರಂಗೋಲಿ ಸದಾನಂದ ಶೆಟ್ಟಿ , ಉದ್ಯಮಿ ಜನಾರ್ಧನ ಅರ್ಕುಳ , ಇರಾ ಬಂಟರ ಸಂಘ ದ ಅಧ್ಯಕ್ಷ ಚಂದ್ರಹಾಸ್ ರಾಯ್ ಬಾಲಾಜಿಬೈಲ್  ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here