ಬಂಟ್ವಾಳ: ವರ್ಗದ ಕುಮ್ಕಿ ಸ್ಥಳವನ್ನು ವರ್ಗ ಜಮೀನು ಮಾಲಕರಿಗೆ ಖಾಯಂ ಮಾಡದೆ ಸರಕಾರದ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ, ಬಡವರಿಗೆ, ನಿವೃತ್ತ ಸೈನಿಕರಿಗೆ ಹಂಚಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಅವರ ನೇತ್ರತ್ವದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದರು.
ರಾಜ್ಯದಲ್ಲಿ ಎಷ್ಟೋ ವರ್ಗದ ಜಾಗದವರು ಅವರ ವರ್ಗ ಜಮೀನಿನ ಲಗ್ತಿ ಕುಮ್ಕಿ ಸ್ಥಳ ಎಂದು ಎಕ್ರಾನುಗಟ್ಟಲೆ ಸ್ಥಳವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆದರೆ ಅದೇ ರೀತಿ ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಜಮೀನಿನ ಕೊರತೆಯಿಂದ ನಿವೇಶನ ರಹಿತವಾಗಿದ್ದಾರೆ ಎಂದು ಸದಾಶಿವ ಬಂಗೇರ ಹೇಳಿದ್ದಾರೆ.


ಜೊತೆಗೆ ಕಡು ಬಡವರು ವಾಸ್ತವ್ಯಕ್ಕೆ ಜಾಗದ ಸಮಸ್ಯೆ ಯಿಂದ ಕೊರಗುತ್ತಿದ್ದಾರೆ. ಹಾಗಾಗಿ ಬಡವರ ಕಣ್ಣೀರೋರಸುವ ಉದ್ದೇಶದಿಂದ ಅಂತಹ ಜಾಗವನ್ನು ಅಧಿಕಾರಿಗಳು ಗುರುತಿಸಿ ಸರಕಾರದ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನಕ್ಕೆ, ಬಡವರಿಗೆ ನಿವೇಶನ ಮಂಜೂರಾತಿ ಬಗ್ಗೆ, ನಿವೃತ್ತ ಸೈನಿಕರಿಗೆ ಕಾಯ್ದಿರಿಸಿ ಎಂದು ಮನವಿ ಮಾಡಿದರು.
ಇಂತಹ ಕ್ರಮದಿಂದ ಅತೀವವಾಗಿ ಜಮೀನು ಹೊಂದಿದ ವ್ಯಕ್ತಿಗಳು ಸರಕಾರಿ ಜಮೀನು ಕಬಳಿಕೆ ಕೂಡಾ ತಪ್ಪುತ್ತದೆ.
ಅಷ್ಟು ಮಾತ್ರವಲ್ಲದೆ ಬಂಟ್ವಾಳ ತಾಲೂಕು ಜಿಲ್ಲಾ ಕೇಂದ್ರ ವಾಗುವ ಸಾಧ್ಯತೆ ಇರುವುದರಿಂದ ಅಂತಹ ಸಂದರ್ಭದಲ್ಲಿ ಸರಕಾರಿ ಜಮೀನಿನ ಅವಶ್ಯ ಕತೆ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯ ಸಿದ್ದೀಕ್, ತಾಲೂಕು ಯುವಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಲ್ಲಡ್ಕ, ಸಮಾಜಕಾರ್ಯಕರ್ತ ಬಾನುಪ್ರಕಾಶ್, ಪ್ರಮುಖರಾದ ಮಹಮ್ಮದ್ ನಂದಾವರ, ವಾಸು ಪೂಜಾರಿ ಕಡೇಶಿವಾಲಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here