ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡಿರುವ 5 ಲಕ್ಷ ರೂ. ಚೆಕ್ಕನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಆನಂದತೀರ್ಥರವರಿಗೆ ಶ್ರೀ.ಕ್ಷೇ.ಗ್ರಾ.ಯೋ.ಯ ಜಿಲ್ಲಾನಿರ್ದೇಶಕ ಸತೀಶ್ ಶೆಟ್ಟಿ ಅವರು ಹಸ್ತಾಂತರಿಸಿದರು. ಈ ಸಂದರ್ಭ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಚಂದ್ರಭಟ್, ಸಮಿತಿ ಸದಸ್ಯರಾದ ಮನ್ಮಥರಾಜ್, ಹರೀಶ್ಚಂದ್ರ ಭಟ್, ಎಂ.ಕೆ.ಸುನೀಲ್, ರಾಮಣ್ಣ ಪೂಜಾರಿ, ರಾಮಚಂದ್ರಗೌಡ,  ನಾರಾಯಣಭಟ್, ಅರ್ಚಕರಾದ ವೆಂಕಟದಾಸ್ ಭಟ್ ,  ವಲಯ ಒಕ್ಕೂಟದ ಅಧ್ಯಕ್ಷ ವಸಂತಮೂಲ್ಯ, ವಿದ್ಯಾ, ಮನೋಹರ್, ಗಣೇಶ್, ಒಕ್ಕೂಟದ ಅಧ್ಯಕ್ಷ ವಾಮನನಾಯ್ಕ್, ಮೇಲ್ವಿಚಾರಕಿ ಆಶ್ವಿನಿ, ಸೇವಾಪ್ರತಿನಿಧಿ ಶಾಂತ, ವಿಜಯ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here