ಬಂಟ್ವಾಳ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯ ಜೊತೆ ಸಮಾಜದ ಆಗು, ಹೋಗುಗಳ ಬಗ್ಗೆಯು ಜ್ಙಾನವನ್ನು ವಿಸ್ತರಿಸಬೇಕು ಎಂದು ಬಿ.ಸಿ.ರೋಡಿನ  ರಾಣಿ ಅಬ್ಬಕ್ಕ ತುಳು ಅಧ್ಯಯನ  ಕೇಂದ್ರದ ಅಧ್ಯಕ್ಷ ಪ್ರೋ.ತುಕರಾಂ ಪೂಜಾರಿ ತಿಳಿಸಿದ್ದಾರೆ. ಬಿ.ಸಿ.ರೋಡಿ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜಸೇವಾ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್,ಇಂಟರ್ ನೆಟ್ ಇತ್ಯಾದಿಗಳನ್ನು ತಮ್ಮ ಜ್ಙಾನದ ಬೆಳವಣಿಗೆಗೆ ಬಳಸಿಕೊಳ್ಳಬೇಕೇ ವಿನಹ ಅದನ್ನೊಂದು ದುಶ್ಚಟವನ್ನಾಗಿಸಬಾರದು ಎಂದು ಕಿವಿಮಾತು ಹೇಳಿದರು.

ಇನ್ನೋರ್ವ ಅತಿಥಿಯಾಗಿದ್ದ ಮಂಗಳೂರು ಐಎಎಸ್ ಆಕಾಡೆಮಿ ನಿರ್ದೇಶಕ ಸುರೇಶ್ ಮಾತನಾಡಿ, ಶಿಕ್ಷಣದ ಬಳಿಕ ವಿದ್ಯಾರ್ಥಿಗಳು ಉತ್ತಮವಾದ ಉದ್ಯೋಗ ಪಡೆಯಲು ವಿವಿಧ ಪರೀಕ್ಷೆಯನ್ನು ಯಾವರೀತಿ ಎದುರಿಸಬೇಕೆಂಬುದರ ಕುರಿತು ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.ಸಂಘದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಉಪಾಧ್ಯಕ್ಷಬೊಳ್ಳುಕಲ್ಲು ನಾರಾಯಣ ಪೂಜಾರಿ, ಲೆಕ್ಕಪರಿಶೋಧಕ ಬಿ.ಸತೀಶ್, ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್,  ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಸಮಾಜದ 37 ವಿದ್ಯಾರ್ಥಿಗಳಿಗೆ ಒಟ್ಟು 2.75 ಲಕ್ಷ ರೂ.ಪ್ರೋತ್ಸಾಹಧನವನ್ನು ಸಂಘದ ವತಿಯಿಂದ ವಿತರಿಸಲಾಯಿತು. ಸಂಘದ ಪ್ರ.ಕಾರ್ಯದರ್ಶಿ ರಮೇಶ್ ತುಂಬೆ ಪ್ರಸ್ತಾವಿಸಿ, ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಸುವರ್ಣ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here