ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಗ್ರಾಮ ಪಂಚಾಯತ್ ವಲಯ ಮಟ್ಟದ ಪಂಚಾಯತ್ ಮಿಲನ 2019 ಕಾರ್ಯಕ್ರಮ ಸಿದ್ದಕಟ್ಟೆ ಹರ್ಷಾಲಿ ಸಭಾ ಭವನದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ಉದ್ಘಾಟಿಸಿ ಪಕ್ಷದ ಕಾರ್ಯಕರ್ತರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದವರ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಸೋಲಾಯಿತು. ಮುಂದಿನ ದಿನಗಳಲ್ಲಿ ವಿರೋಧ ಪಕ್ಷದವರ ಆರೋಪಕ್ಕೆ ಪ್ರತ್ಯುತ್ತರ ನೀಡುವ ಮುಖಾಂತರ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ಯಾವುದೇ ಕಾರಣಕ್ಕೂ ದೃತಿ ಗೆಡದೆ ಪಕ್ಷದ ಸಂಘಟನೆಯಲ್ಲಿ ಹಾಗೂ ಬಲವರ್ದನೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಮುಖಾಂತರ ಪಕ್ಷವನ್ನು ಬಲಿಷ್ಟಗೊಳಿಸುವಂತೆ ಕರೆ ನೀಡಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರ್‌ರಚಿಸಿ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡುವ ಮುಖಾಂತರ ಬಲಿಷ್ಠಗೊಳ್ಳುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ಪರಾಮವರ್ಶಿಸಿದರು. ಸಂಗಬೆಟ್ಟು ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ದಿನೇಶ್ ಶೆಟ್ಟಿಗಾರ್ ಇವರನ್ನು ಆಯ್ಕೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷರಾದ ಹಮೀದ್ ಎಸ್.ಎ, ದೇವರಾಜ್ ಸಾಲ್ಯನ್, ನೋಣಯ್ಯ ಪೂಜಾರಿ, ಜಯಕರ್ ಶೆಟ್ಟಿ, ದಾಮೋದರ ನಾಯಕ್, ವಾಮನ್ ಬುನ್ನನ್ ಪಂಚಾಯತ್ ಸದಸ್ಯರಾದ ದೇವಪ್ಪ ಕರ್ಕೇರ, ಶೇಖರ್ ನಾಯ್ಕ, ಸುಭಾಶಿನಿ, ಶಾರದ, ಮಯ್ಯದ್ದಿ, ಹಾಗೂ ಮುಖಂಡರಾದ ಡಾ.ಪ್ರಭಾಚಂದ್ರ, ಮಂಜಯ್ಯ ಶೆಟ್ಟಿ, ದಾಮೋದರ ಮಂಚಕಲ್ಲು, ಸೀತರಾಮ್ ಶೆಟ್ಟಿ, ಬುಜಬಳಿ ಕಂಬಳಿ,ಲೋಕಯ್ಯ ಪೂಜಾರಿ, ಫಾರೂಕ್ ಕೆರೆಬಳಿ, ಶಿವಾನಂದ ರೈ, ಉಸ್ಮಾನ್, ಅಶೋಕ್ ಆಚಾರಿ, ಮೋನಾಕ ಕಲ್ಕುರಿ, ಶಶಿಕುಮಾರ್, ಅಲ್ತಾಫ್ ಅಹಮದ್, ಜಲಜ ಪೂಜಾರಿ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿಗಾರ್ ಸ್ವಾಗತಿಸಿ ಜಯಕರ್ ಶೆಟ್ಟಿ ವಂದನಾರ್ಪಣೆಗೈದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here