ಬಂಟ್ವಾಳ: ಸಾಂಬಾರು ಬೆಳೆಗಳ ರಾಜ ಎಂದೇ ಕರೆಯಲ್ಪಡುವ ಕರಿಮೆಣಸು ಬಳ್ಳಿಯನ್ನು ವಿಯೆಟ್ನಾಂ ಮಾದರಿಯಲ್ಲಿ ಬೆಳೆಸುವ ಮೂಲಕ
ಇಲ್ಲೊಬ್ಬ ಪ್ರಗತಿಪರ ಕೃಷಿಕ, ಬಂಟ್ವಾಳ ತಾಲೂಕು ಬಿ.ಕಸ್ಬಾ ನಿವಾಸಿ ಪಿಯೂಸ್ ಎಲ್.ರೊಡ್ರಿಗಸ್ ಪರಿಚಯಿಸಿದ್ದಾರೆ.


ಯಾಕೆ ಇದಕ್ಕೆ ಈ ಹೆಸರು ಬಂತು ಎಂಬುದು ಇಲ್ಲಿನ ಕುತೂಹಲ. ವಿಯೆಟ್ನಾಂನಲ್ಲಿ ಮರವನ್ನು ಕಡಿದು ನಿರ್ದಿಷ್ಟ ಎತ್ತರದ ಕಂಬಗಳನ್ನು ಮಾಡಿ ಅದನ್ನು ನೆಲದಲ್ಲಿ ಹೂತು ಕರಿಮೆಣಸು ಕೃಷಿ ಪೂರ್ಣ ವೈಜ್ಞಾನಿಕ ಕ್ರಮದಲ್ಲಿ ಮಾಡುತ್ತಾರೆ.


ಇಲ್ಲಿ ಇನ್ನೂ ವಿಶಿಷ್ಟ ಎನ್ನುವಂತೆ ಅನುಪಯುಕ್ತ ಸಿಮೆಂಟ್ ಕಂಬಗಳನ್ನು ಬಳಸಿದ್ದಾರೆ. ಕಂಬಕ್ಕೆ ಐದು ಅಡಿಗಳಷ್ಟು ಎತ್ತರಕ್ಕೆ ನೆಟ್ ಬೇಲಿಯನ್ನು ಸುತ್ತಿ, ಅದರ ಒಳಗೆ ತೆಂಗಿನ ಸಿಪ್ಪೆಗಳ ಹುಡಿಯನ್ನು ತುಂಬಿಸಿದ್ದಾರೆ. ಕಂಬದ ಬುಡದಲ್ಲಿ ಬಳ್ಳಿಗಳನ್ನು ನೆಟ್ಟು ಹಬ್ಬಿಸುವ ಮೂಲಕ ವಿಶಿಷ್ಟತೆಯನ್ನು ಮೆರೆದಿದ್ದಾರೆ.
ದೀರ್ಘಾವಧಿ ಉಳಿದು ಫಸಲು ನೀಡುವ ಈ ಕೃಷಿಗೆ ಒಮ್ಮೆ ಮಾತ್ರ ವೆಚ್ಚವನ್ನು ಮಾಡಿ ನಂತರದ ದಿನಗಳಲ್ಲಿ ಅತ್ಯಲ್ಪ ಶ್ರಮದಿಂದ ಅಧಿಕ ಲಾಭವನ್ನು ಪಡೆಯಬಹುದು. ಇದರಲ್ಲಿ ಆರೈಕೆ ಶ್ರಮ ಕಡಿಮೆ. ವೆಚ್ಚ ನಗಣ್ಯ ಎಂಬಂತಿದೆ. ವಿದ್ಯುತ್ ಸರಬರಾಜು ನಿರುಪಯುಕ್ತ ಸಿಮೆಂಟ್ ಕಂಬಗಳನ್ನು ಬಳಸಿ ಅದಕ್ಕೆ ಐದು ಅಡಿಗಳಷ್ಟು ಎತ್ತರಕ್ಕೆ ಪ್ಲಾಸ್ಟಿಕ್ ನೆಟ್ ಸುತ್ತಿ, ಅದರ ಒಳಗೆ ತೆಂಗಿನ ಸಿಪ್ಪೆಗಳ ಹುಡಿಯನ್ನು ನೆಲದಿಂದ ಸುಮಾರು ಐದು ಅಡಿಗಳಷ್ಟು ತುಂಬಿಸಿ ಅದರಲ್ಲಿ ಕರಿಮೆಣಸು ಬಳ್ಳಿಗಳನ್ನು ಹಬ್ಬಿಸುವ ಮೂಲಕ ವಿಶಿಷ್ಟತೆಯನ್ನು ಮೆರೆದಿದ್ದಾರೆ.
ದೀರ್ಘಾವಧಿ ಉಳಿದು ಫಸಲು ನೀಡುವ ಕರಿಮೆಣಸು ಕೃಷಿಗೆ ಒಮ್ಮೆ ಮಾತ್ರ ವೆಚ್ಚವನ್ನು ಮಾಡಿದರೆ ಆಯಿತು. ನಂತರದ ದಿನಗಳಲ್ಲಿ ಅತ್ಯಲ್ಪ ಶ್ರಮದಿಂದ ಅಧಿಕ ಲಾಭವನ್ನು ಪಡೆಯಬಹುದು. ವಿಯೆಟ್ನಾಂನಲ್ಲಿ ಕಂಬಗಳನ್ನು ಹಾಕಿ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ರಮದಲ್ಲಿ ಕರಿಮೆಣಸು ಬೆಳೆಯುತ್ತಾರೆ. ಅಲ್ಲಿನ ಕರಿಮೆಣಸು ಉತ್ಕೃಷ್ಟ ಗುಣಮಟ್ಟಕ್ಕೂ ಹೆಸರಾಗಿದೆ ಎನ್ನುತ್ತಾರೆ.
ಪ್ರಯೋಜನ ಸಾಮಾನ್ಯ ಸ್ಥಿತಿಯಲ್ಲಿ ಕರಿಮೆಣಸಿನ ಬಳ್ಳಿಯನ್ನು ನೆಲದಲ್ಲಿ ನೆಟ್ಟು ಯಾವುದೇ ಮರಕ್ಕೆ ಹಬ್ಬಿಸುವುದು ರೂಢಿಗತ ಕ್ರಮ. ಇದು ವರ್ಷಕ್ಕೆ ಎರಡು ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಹುದು. ಆದರೆ ವಿಯೆಟ್ನಾಂ ಮಾದರಿಯಲ್ಲಿ ಸುಮಾರು ಐದು ಅಡಿಗಳಷ್ಟು ಎತ್ತರಕ್ಕೆ ಕೇವಲ ಆರು ತಿಂಗಳ ಅವಧಿಯಲ್ಲಿ ಬೆಳೆದಿರುವುದು ಇದರ ವಿಶೇಷತೆ.
ಗಿಡವು ಬೆಳೆದಂತೆ ಮತ್ತೆ ಕಂಬಕ್ಕೆ ಪ್ಲಾಸ್ಟಿಕ್ ನೆಟ್ ಸುತ್ತುವ ಮೂಲಕ ಶೀಘ್ರ ಮತ್ತಷ್ಟು ಮೇಲಕ್ಕೆ ಹಬ್ಬಿಕೊಳ್ಳಲು ಇದರಿಂದ ಅನುಕೂಲ ಆಗುತ್ತದೆ ಎಂದು ಪಿಯೂಸ್ ಅವರು ತಿಳಿಸುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here