ಬಂಟ್ವಾಳ : ಪುರಾಣ ಪ್ರಸಿದ್ಧ ಸಮುದ್ರ ಮಟ್ಟದಿಂದ ಒಂದು ಸಾವಿರ ಆಡಿಗೂ ಎತ್ತರದ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು-ಗೋಳ್ತಮಜಲು-ಅಮ್ಟೂರು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶದ ನಡುವೆ ಕಾಣುವ ಈ ಕಗ್ಗಲ್ಲ ಪರ್ವತಕ್ಕೆ ನಿರ್ಮಿಸಿದ 350 ಮೆಟ್ಟಲುಗಳನ್ನು ಏರಿದಾಗ ಪ್ರಕೃತಿ ಸೌಂದರ್ಯದ ಮಧ್ಯೆ ಸಾಕ್ಷಾತ್ಕಾರವಗುವುದು ಸದಾಶಿವ ಸಾನಿಧ್ಯ.


ಆಗಸ್ಟ್ 1 ಆಟಿ ಅಮವಾಸ್ಯೆ
ನರಹರಿ ಪರ್ವತದಲ್ಲಿ ಗಸ್ಟ್ 1ರಂದು ಆಟಿ ಅಮಾವಸ್ಯೆಯ ವಿಶೇಷ ತೀರ್ಥಸ್ನಾನ ಹಾಗೂ ನಾಗದೇವರಿಗೆ ವಿಶೇಷ ’ಆಶ್ಲೇಷ ಪಜೆಯು’ ಜರಗಲಿರುವುದು.
ಸರ್ವರೋಗ ನಿರ್ವಾಕ ಎಂಬ ಅನನ್ಯ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ’ಸಪ್ತವರ್ಣಿ’ ಪಾಲಸ ಮರದ ರಸವನ್ನು ಸೂರ್ಯೋಧಯದ ಮೊದಲು ಸೇವಿಸುವ ದಿನವಾದ ಆಟಿ (ಅಷಾಡ) ಅಮಾವಾಸ್ಯೆಯಂದು ಪೌರಾಣಿಕ ಹಿನ್ನಲೆಯ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನಗೈದರೆ ಸರ್ವಪಾಪ ನಿವಾರಣೆಗೊಂಡು ಇಷ್ಟಾರ್ಥ ಸದ್ದಿಸುವುದು ಎಂಬುದು ನಂಬಿಕೆ. ಆದ್ದರಿಂದ ಪರ್ವತದ ತುತ್ತ ತುದಿಯಲ್ಲಿ ಬಂಡೆಕಲ್ಲಿನ ಮೇಲೆ ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಶಂಖ, ಚಕ್ರ, ಗದಾ, ಪದ್ಮ ಆಕಾರದ ತೀರ್ಥ ರೂಪಗಳಲ್ಲಿ ಅಂದು ಮುಂಜನೆಯೆ ಅಸಾಂಖ್ಯಾತ ಭಕ್ತರು ಮುಖ್ಯವಾಗಿ ನವ ವಧೂವರರು ಮಿಂದು ನಾಗದೇವರಿಗೆ ವಿನಾಯಕ ದೇವರಿಗೆ ಸದಾಶಿವ ದೇವರಿಗೆ ಪಜೆ ಸಲ್ಲಿಸಿ ಪುನೀತರಾಗುತ್ತಾರೆ.
ಅಭಿವೃದ್ಧಿ : ಒಂದೊಮ್ಮೆ ದುರ್ಗಮವಾಗಿದ್ದ ನರಹರಿ ಪರ್ವತವನ್ನು ವಿಶೇಷ ಆಕರ್ಪಣೆಯ ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದ ಅಭಿವೃದ್ಧಿಯ ರೂವಾರಿ ದಿ.ಡಾ|ಕಲ್ಲಾಜೆ ಭಾಸ್ಕರ ಮಾರ್ಲ ಅವರದ್ದು.
ಈದೀಗ ೬ಕೋಟಿ ರೂ ವೆಚ್ಚದಲ್ಲಿ ಶಿಲಾಮಯ ದೇವಲಾಯ ನಿರ್ಮಾಣವಾಗಲಿದ್ದು ಸಹೃದಯ ಭಕ್ತಾಧಿಗಳೆಲ್ಲರೂ ಕೈ ಜೋಡಿಸಬೇಕೆಂದು ಆಡಳಿತ ಮೋಕ್ತೆಸರರಾದ ಡಾ| ಪ್ರಶಾಂತ್ ಮಾರ್ಲ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ| ಆತ್ಮರಂಜನ್ ರೈ ಯವರು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here