Tuesday, September 26, 2023

ಅಮ್ಟಾಡಿ ಗ್ರಾಮ ಮಟ್ಟದ “ಪಂಚಾಯತ್ ಮಿಲನ”

Must read

ಬಂಟ್ವಾಳ : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂ ಅಮ್ಟಾಡಿ ಗ್ರಾಮ ಪಂಚಾಯತ್ ವಲಯ ಮಟ್ಟದ “ಪಂಚಾಯತ್ ಮಿಲನ 2019” ಕಾರ್ಯಕ್ರಮ ಬಂಟ್ವಾಳದಲ್ಲಿ ನಡೆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಂಬರುವ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗುವಂತೆ ತಿಳಿಸಿದರು.


ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ಪರಾಮವರ್ಶಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ಪಕ್ಷ ಮುಖಂಡ ಪಿಯೂಸ್ ಎಲ್. ರೋಡ್ರಿಗಸ್, ತಾಪಂ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಎಫ್ರೀಂ ಸಿಕ್ವೇರಾ, ಜಗದೀಶ್ ಕೊಯಿಲಾ, ರತ್ನಾಕರ ಶೆಟ್ಟಿ ಕುರಿಯಾಳ, ಚಿತ್ತರಂಜನ್ ಶೆಟ್ಟಿ, ಡಾ. ಶೇರಾ, ಪ್ಲೋಸಿ ಡಿಸೋಜಾ ಹಾಗೂ ಪಂಚಾಯತ್ ಸದಸ್ಯರು, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವಲಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿ, ಫ್ರಾನ್ಸಿಸ್ ಸಲ್ದಾನ ವಂದಿಸಿದರು.

More articles

Latest article