ಕಾರ್ಗಿಲ್ ವಿಜಯ ದಿವಸಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ಧಕಟ್ಟೆ ಘಟಕದ ಸದಸ್ಯರು ನಿವೃತ್ತ ಯೋಧ ಮೋಹನ್ ಜಿ ಮೂಲ್ಯ, ಸಂಗಬೆಟ್ಟು ಇವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ, ಗೌರವಿಸಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ರತ್ನಕುಮಾರ್ ಚೌಟ, ಎಬಿವಿಪಿ ಸಿದ್ಧಕಟ್ಟೆ ಘಟಕದ ಅಧ್ಯಕ್ಷ ಗುರುಪ್ರಸಾದ್, ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಕೆ ಕುಲಾಲ್ ಹಾಗೂ ಬಿಜೆಪಿ ಕಾರ್ಯಕರ್ತ ಭೋ ಜ ಶೆಟ್ಟಿಗಾರ್ ಸಂಗಬೆಟ್ಟು, ಸನ್ಮಾನವನ್ನು ನೆರವೇರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ್ ಜಿ ಮೂಲ್ಯ, ಸೈನ್ಯದಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದ್ದು ನನ್ನ ಜೀವನದ ಅತೀ ದೊಡ್ಡ ಭಾಗ್ಯ ಎಂದರು. ಸೈನ್ಯದಲ್ಲಿ ಏಕ ರೀತಿಯ ಮನೋಭಾವ, ಚಿಂತನೆ ಮತ್ತು ಉದ್ದೇಶ ವನ್ನು ಹೊಂದಿರುವುದರಿಂದ ಯಾವುದೇ ರೀತಿಯ ಸಮಸ್ಯೆ, ಕಷ್ಟಗಳು ಉದ್ಭವಿಸುವುದಿಲ್ಲ. ಹೊಸ ರೀತಿಯ ಹುಮ್ಮಸು ನಿತ್ಯ ನಿರಂತರವಾಗಿ ಇರುತ್ತದೆ. ಯುವ ಪೀಳಿಗೆಯು ಸೈನ್ಯದತ್ತ ಹೆಚ್ಚು ಒಲವು ನೀಡಬೇಕು ಎಂದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ರತ್ನಕುಮಾರ್ ಚೌಟ ಮಾತನಾಡಿ, ದೇಶ ಕಾಯುವ ಯೋಧನಿಗೆ ಎಬಿವಿಪಿ ಸಿದ್ಧಕಟ್ಟೆ ಘಟಕವು ಮಾಡಿದ ಸನ್ಮಾನವು ಶ್ಲಾಘನೀಯ, ಮುಂದೆ ಇದೇ ರೀತಿಯಾಗಿ ಸಮಾಜ ಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ವಿಮಲಾ ಮೋಹನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ಘಟಕದ ಉಪಾಧ್ಯಕ್ಷರಾದ ದಿನೇಶ್, ರಾಜೇಶ್, ಕಾರ್ಯದರ್ಶಿ ದೀಪಕ್,ಸಹ-ಕಾರ್ಯದರ್ಶಿಗಳಾದ ಲಿತೇಶ್, ಕಿರಣ್,ಕಾರ್ಯಕರ್ತರಾದ ಸಂತೋಷ್ ಸೊರ್ನಾಡ್, ಅರುಣ್, ಮನೀಶ್, ಪ್ರದೀಪ್, ರಂಜಿತ್, ಸೂರಾಜ್ ಉಪಸ್ಥಿತರಿದ್ದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.