Tuesday, October 31, 2023

ವಿಟ್ಲ ಜೇಸೀಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಹುದ್ದೆ ಸ್ವೀಕಾರ

Must read

ವಿಟ್ಲ: ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧೀರ್ಘ ಕಾಲದಿಂದ ನಿರ್ದೇಶಕ ಹಾಗೂ ಆಡಳಿತಾಧಿಕಾರಿಯಾಗಿ ಕಾರ್‍ಯ ನಿರ್ವಹಿಸುತ್ತಿದ್ದ ವಿ. ಮೋನಪ್ಪ ಶೆಟ್ಟಿ ದೇವಸ್ಯ ಇವರು ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡ ರಾಧಾಕೃಷ್ಣ ಎರುಂಬು ಇವರಿಗೆ ಹುದ್ದೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಎನ್ ಕೂಡೂರು, ಕಾರ್‍ಯದರ್ಶಿ ಶ್ರೀಧರ ಕೊಡಕ್ಕಲ್, ಜೊತೆಕಾರ್‍ಯದರ್ಶಿ ಶ್ರೀಪ್ರಕಾಶ್, ಬಾಬು ಕೆ.ವಿ, ಪ್ರಿನ್ಸಿಪಾಲ್ ಡಿ.ಜಯರಾಮ ರೈ, ವೈಸ್‌ಪ್ರಿನ್ಸಿಪಾಲ್ ಶಾಲಿನಿ ಆರ್ ನೋಂಡ, ಸಹಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯರು ಉಪಸ್ಥಿತರಿದ್ದರು.

More articles

Latest article