Monday, September 25, 2023
More

  ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುವುದು ಪ್ರತಿ ಯೊಬ್ಬರ ಕರ್ತವ್ಯ : ಕರ್ಕೇರ

  Must read

  ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ / ವಿಟ್ಲ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಂಟ್ವಾಳ ಇದರ ವತಿಯಿಂದ ಖಾಸಗಿ ವೈದ್ಯಾಧಿಕಾರಿಗಳಿಗೆ ಸ್ಕ್ಯಾನಿಂಗ್ ಸೆಂಟರ್ ತಾಂತ್ರಿಕ ಸಿಬ್ಬಂದಿ ಗಳಿಗೆ ಪಿ.ಸಿ.ಪಿ.ಎನ್.ಡಿ.ಟಿ.ಕಾಯ್ದೆ 1994 ರ ಬಗ್ಗೆ ಮಾಹಿತಿ ಕಾರ್ಯಗಾರ ಬಿಸಿರೋಡಿನ ತಾ.ಪಂ.ಕಚೇರಿಯ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.

  ಕಾರ್ಯಕ್ರಮ ವನ್ನು ಉದ್ಘಾಟಿಸಿದ ಅಬ್ಬಾಸ್ ಆಲಿ
  ಸರಕಾರದ ಪ್ರತಿಯೊಂದು ಕಾರ್ಯಕ್ರಮ ಗಳು ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ನಾಗರೀಕ ಭಾಗವಹಸುವಿಕೆ ಬಹು ಮುಖ್ಯವಾಗಿದೆ.
  ಸಮಾಜದಲ್ಲಿ ರುವ ವ್ಯವಸ್ಥೆ ಗಳನ್ನು ಸರಿದೂಗಿಸಿಕೊಂಡು ಭಾರತೀಯ ನಾಗರೀಕರಾಗಿ ಎಂದು ಅವರು ಹೇಳಿದರು.

  ಕಾರ್ಯಕ್ರಮದ ಆಧ್ಯಕ್ಷತೆ  ಮಾತನಾಡಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಮಾಜದ ಲ್ಲಿ ಅಗುವ ಸಾಧಕ ಬಾದಕಗಳ ಬಗ್ಗೆ ಒಟ್ಟಾಗಿ ಚರ್ಚೆ ನಡೆಸಿ ಅದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿಜವಾಗಿ ಉತ್ತಮ ಕಾರ್ಯ ಎಂದು ಅವರ ಹೇಳಿದರು.
  ಸರಕಾರ ಕಾನೂನುಗಳು ಸರಿಯಾಗಿ ಜಾರಿಯಾಗಬೇಕಾದರೆ ಸಮಾಜದ ಪ್ರತಿಯೊಬ್ಬರ ಜವಬ್ದಾರಿ ಇದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
  ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುವುದು ಪ್ರತಿ ಯೊಬ್ಬರ ಕರ್ತವ್ಯ ಎಂದರು.

  ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾಜೋಶಿ ಪ್ರಸ್ತಾವಿಕವಾಗಿ ಮಾತನಾಡಿ ಹೆಣ್ಣು ಮಕ್ಕಳ ಜನಸಂಖ್ಯೆ ಯಲ್ಲಿ ಕುಸಿತ ಕಂಡು ಬಂದಿರುವುದು ಆರೋಗ್ಯ ಕರ ಲಕ್ಷಣವಲ್ಲ,‌ ಸಮತೋಲನ ಕಂಡು ಬಂದಾಗ ಇದಕ್ಕೆ ಕಾರಣಗಳೇನು ಹಾಗೂ ದುಷ್ಪರಿಣಾಮ ಗಳಿಗೆ ತಡೆ ನೀಡುವ ಉದ್ದೇಶದಿಂದ ಸರಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
  ಬಾಲ್ಯ ವಿವಾಹ, ಅತ್ಯಾಚಾರ, ವರದಕ್ಷಿಣೆ , ಹೆಣ್ಣು ಶಿಶು ಗಳ ಹತ್ಯೆ, ಭ್ರೂಣ ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣದ ಹತ್ಯೆ ಇವುಗಳ ತಡೆಯಲು ಕಾಯ್ದೆ ಗಳು ಬಂದಿದ್ದು ಇದರ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

  ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ.ಬಂಗೇರ,
  ತಾ.ಪಂ.ಇ.ಒ ರಾಜಣ್ಣ,  ಜಿಲ್ಲಾ ಕುಟುಂಬ ಕಲ್ಯಾಣ
  ನೊಡೆಲ್ ಅಧಿಕಾರಿ ಡಾ ಸಿಕಂದರ್ ಪಾಷಾ ಸಂಪನ್ಮೂಲ ವ್ಯಕ್ತಿ ಗಳಾದ
  ಐ.ಎಂ.ಎ.ಅಧ್ಯಕ್ಷ ಪ್ರದೀಪ್ ಶೆಟ್ಟಿ, ಡಾ ನವೀನ್ ಕುಲಾಲ್, ಡಾ! ಭಾಗ್ಯಶ್ರೀ ಬಾಳಿಗಾ, ಜಿಲ್ಲಾ ಕುಟುಂಬ ಕಲ್ಯಾಣ  ಕಚೇರಿ ಕಾರ್ಯಕ್ರಮ ನಿರ್ವಾಹಕರಾದ  ಗುಲ್ಜಾರ್ ಬಾನು
  ವಕೀಲರಾದ ಆಶಾ ಮಣಿ ರೈ , ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾಜೋಶಿ ಉಪಸ್ಥಿತರಿದ್ದರು.
  ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಸ್ವಾಗತಿಸಿ

  ಸರೋಜಾ ಭಟ್
  ಧನ್ಯವಾದ ನೀಡಿದರು.
  ಹಿರಿಯ ಮೇಲ್ವಿಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು

  More articles

  LEAVE A REPLY

  Please enter your comment!
  Please enter your name here

  Latest article