ಬಂಟ್ವಾಳ: ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಿಸಿರೋಡಿನ ಗಾಣದಪಡ್ಪು ಅಂಗಡಿಯೊಂದರಲ್ಲಿ ಸಿಗರೇಟ್ ಕೊಂಡು ಹಣ ನೀಡದೇ ಪರಾರಿಯಾದ



ಘಟನೆ ಜೂನ್ 9 ರಂದು ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ನಿರಂತರವಾಗಿ ಎರಡು ದಿನಗಳಲ್ಲಿ ಇದೇ ರೀತಿ ವಂಚಿಸಿ ದ ಘಟನೆ ಬೆಳಕಿಗೆ ಬಂದಿದ್ದು , ಅಂಗಡಿ ಮಾಲಕರು ಭಯಬೀತರಾಗಿದ್ದಾರೆ.
ಘಟನೆಯ ವಿವರ:
ಬಿ. ಸಿ ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಎದುರಿನ ಮಾಣಿಕ್ಯ ಸ್ಟೋರ್ ಗೆ ಜೂನ್ 9 ರಂದು ಆದಿತ್ಯವಾರ ರಾತ್ರಿ ಸುಮಾರು 8-30ಕ್ಕೆ ಬೈಕ್ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ಅಪರಿಚಿತ ಯುವಕರು, ಒಬ್ಬಾತ ಅಂಗಡಿಗೆ ಬಂದು ದುಬಾರಿ ಬೆಲೆಯ ನಾಲ್ಕು ಪ್ಯಾಕೆಟ್ ಸಿಗರೇಟ್ ಪಡೆದು, ಒಂದು ಸಿಗರೇಟ್ ಸೇದಲು ಕೇಳಿ ಅಂಗಡಿ ಮಾಲಕ ಲೋಕೇಶ್ ಬಿಲ್ಲು 650ರೂ ಆಯಿತೆಂದಾಗ, ಒಂದು ಬಾಟಲ್ ಸ್ಪ್ರೈಟ್ ತೆಗೆದಿಡಿ ಬೈಕ್ನಲ್ಲಿರುವ ಸ್ನೇಹಿತನಲ್ಲಿ ಹಣ ಕೇಳಿ ತರುತ್ತೆನೆಂದು ಹೊರಗಡೆ ರಸ್ತೆ ಬದಿಗೆ ಹೋದವನು, ಅಂಗಡಿ ಮಾಲಕ ಲೋ ಕೇಶ್ ಫ್ರಿಡ್ಜ್ ನಿಂದ ಸ್ಪ್ರೈಟ್ ಬಾಟಲ್ ತೆಗೆಯುವಾಗ ಬೈಕ್ ಸ್ಟಾರ್ಟ್ ಮಾಡಿ 650 ಬೆಲೆಯ ಸಿಗರೇಟ್ ಸಮೇತ ಅತೀ ವೇಗದಲ್ಲಿ ಪರಾರಿಯಾಗಿದ್ದಾರೆ. ಮರುದಿವಸ ಮಣಿಹಳ್ಳ ಶ್ರೀಧರ್ ಎಂಬವರ ಅಂಗಡಿಯಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಅಂಗಡಿಯಲ್ಲಿರುವ ಸಿ. ಸಿ ಕ್ಯಾಮರಾದಲ್ಲಿ ಒಬ್ಬ ಯುವಕನ ಮುಖಚಹರೆ ಸೆರೆಯಾಗಿದೆ. ಈ ವಂಚಕ ಯುವಕರ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ವಿನಂತಿ. ಇಂತಹ ವಂಚಕರು ನಿಮ್ಮ ಊರಿಗೂ ಬರಬಹುದು ಎಚ್ಚರವಹಿಸಿ.