ಬಂಟ್ವಾಳ: ನಗರ ಠಾಣೆ ಹಾಗೂ ಎ.ಎಸ್.ಪಿ. ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣ ದಲ್ಲಿರುವ ಅಂಗಡಿಗೆ ನುಗ್ಗಿ ಹಣ ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬಿಸಿರೋಡಿನ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಕಟ್ಟಡದ ಲ್ಲಿರುವ ಸೆಲೂನ್ ಗೆ ನುಗ್ಗಿದ ಕಳ್ಳವು 18 ಸಾವಿರ ರೂ ಕಳವು ನಡೆದಿದೆ.
ಅಂಗಡಿಯ ಶಟರ್ ಮುರಿದು ಒಳಗೆ ನುಗ್ಗಿದ ಕಳ್ಳರು ಡ್ರವರ್ ನಲ್ಲಿದ್ದ ನಗದು ಕೊಂಡು ಹೋಗಿದ್ದಾರೆ.
ಜೊತೆಗೆ ಈ ಕಟ್ಟಡದ ಲ್ಲಿರುವ ಹೋಟೆಲ್, ಶ್ರೀದೇವಿ ಬಿಲ್ಡರ್ಸ್ , ಹಿಂದುಸ್ತಾನ್ ಸೇಲ್ಸ್ ಅಂಗಡಿ ಗೆ ನುಗ್ಗಿ ಕಳವಿಗೆ ವಿಫಲ ಯತ್ನ ನಡೆದಿದೆ.
ಠಾಣೆಗೆ ಕೂಗಳತೆಯ ದೂರದಲ್ಲಿ ರುವ ಕಟ್ಟಡದಲ್ಲಿ ಕಳವು ನಡೆದಿದೆಯಾದರೆ ಇನ್ನು ಬಿಸಿರೋಡಿನ ಉಳಿದ ಅಂಗಡಿಗಳ ಗತಿ ಏನು ಎಂಬ ಚಿಂತೆ ಸಾರ್ವಜನಿಕ ರಲ್ಲಿ ಉಂಟಾಗಿದೆ.
ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅಪರಾಧ ವಿಭಾಗದ ಎಸ್. ಐ.ಸುಧಾಕರ ತೋನ್ಸೆ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
