ಬಂಟ್ವಾಳ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಬಂಟ್ವಾಳ ನಂ.1 ಹಾಗೂ ನಂ.2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳ ದ ಕೈಕುಂಜೆ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಂಜಪ್ಪ ಅವರ ನೇತ್ರತ್ವದಲ್ಲಿ ನಡೆಯಿತು.

ಇತ್ತೀಚೆಗೆ ವಾಮದಪದವು ಎಂಬಲ್ಲಿ ಮೆಸ್ಕಾಂ ನಿರ್ಲಕ್ಷ್ಯ ದಿಂದ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ತುಂಗಪ್ಪ ಬಂಗೇರ ಒತ್ತಾಯಿಸಿದರು.
ಬಂಟ್ವಾಳ ಕೊಡಂಬೆಟ್ಟು ಅಜ್ಜಿಬೆಟ್ಟು, ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ಸುಮಾರು 40 ವರ್ಷಗಳ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯಿಸಿದರು.
ಇತ್ತೀಚಿನ ಅನೇಕ ವರ್ಷಗಳಲ್ಲಿ ರೈತರು, ದನ ಕರು ಪ್ರಾಣಿಗಳು ಮಳೆಗಾಲದಲ್ಲಿ ಹಳೆಯ ವಯರ್ ಕಡಿದು ಸ್ಪರ್ಶಿಸಿ ಸಾಯುವುದು ಮಾಮೂಲಿ ಯಾಗುತ್ತಿದೆ, ಹಾಗಾಗಿ ಕೂಡಲೇ ಸಾವು ನೋವು ನಿವಾರಣೆಗಾಗಿ ತಂತಿಗಳನ್ನು ಬದಲಾಯಿಸುವಂತೆ ಮನವಿ ಮಾಡಿದಲ್ಲದೆ, ಸರಕಾರಕ್ಕೂ ನಾವು ಒತ್ತಾಯ ಮಾಡುತ್ತೇವೆ ಎಂದು ಅವರು ಹೇಳಿದರು.
ಒಂದು ವಾರದಲ್ಲಿ ಮೆಸ್ಕಾಂ ಬಿಲ್ ಗಳ ಪ್ರಿಂಟ್ ಮಾಸಿ ಹೋಗುತ್ತದೆ ಎಂದು ನರೇಶ್ ಭಟ್ ಅವರು ಅಧಿಕಾರಿ ಯ ಗಮನಕ್ಕೆ ತಂದರು. ಉತ್ತಮ ಗುಣಮಟ್ಟದ ಪೇಪರ್ ತರಿಸಿ ಬಿಲ್ ನೀಡಬೇಕು ಮೆಸ್ಕಾಂ ಅಧಿಕಾರಿ ಮಂಜಪ್ಪ ಸೂಚನೆ ನೀಡಿದರು.
ಸಾರ್ವಜನಿಕ ಸಮಸ್ಯೆ ಯಾಗುವ ಯಾವುದೇ ಕಾಮಗಾರಿ ಗಳು ಬಾಕಿಯಾಗಬಾರದು , ಕಾರಣಗಳನ್ನು ನೀಡಿ ಗುತ್ತಿಗೆದಾರರು ಹಾದಿ ಬದಲಿಸುವುದು ಬೇಡ , ಗುತ್ತಿಗೆ ದಾರರ ಸಮಸ್ಯೆ ಗೆ ಪ್ರತ್ಯೇಕ ಸಭೆ ಕರೆಯುತ್ತೇನೆ.ಇದು ಜನಸಂಪರ್ಕ ಸಭೆ ಇಲ್ಲಿ ಸಾರ್ವಜನಿಕ ರ ಸಮಸ್ಯೆ ಇಲ್ಲಿ ನಮಗೆ ಪ್ರಮುಖ ಎಂದು ಇಂಜಿನಿಯರ್ ಮಂಜಪ್ಪ ಹೇಳಿದರು.
ವಿದ್ಯುತ್ ಮೀಟರ್ ರೀಡಿಂಗ್ ಮಾಡಲು ಸರಿಯಾಗಿ ಬರದೆ ಸತಾಯಿಸುತ್ತಾರೆ, ಮನಸ್ಸಿಗೆ ಬಂದ ರೀತಿಯಲ್ಲಿ ಬಿಲ್ ನೀಡುತ್ತಾರೆ, ಎಂದು ಅರೋಪ ವ್ಯಕ್ತವಾಯಿತು.
ನಂದಾವರದಲ್ಲಿ ಸುಮಾರು 55 ವರ್ಷಗಳಿಂದ ಹಳೆಯದಾದ ತಂತಿಗಳನ್ನು ಬದಲಿಸಿಲ್ಲ ನಾನೂ ಕೃಷಿ ಕ ತೋಟಕ್ಕೆ ಹೋಗುವುದು ಹೇಗೆ ಎಂದು ಕೃಷಿ ಕ ಇದಿನಬ್ಬ ನಂದಾವರ ಕೇಳಿದರು.
ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹಾಗೂ ಕೃಷಿಕರಿಗೆ ವಿದ್ಯುತ್ ಹಳೆಯ ತಂತಿ ಮತ್ತು ಇತರ ಸಮಸ್ಯೆಗಳ ಬಗ್ಗೆ ಕರಪತ್ರಗಳನ್ನು ನೀಡುವಂತೆ ಇ.ಇ.ಅವರು ಮೆಸ್ಕಾಂ ಸಿಬ್ಬಂದಿ ಗಳಿಗೆ ಸೂಚಿಸಿದರು. ಇ.ಇ.ರಾಮಚಂದ್ರ, ಎ.ಇ.ಇ.ನಾರಾಯಣ ಭಟ್, ಪ್ರಶಾಂತ್ ಪೈ, ಮತ್ತಿತರರು ಉಪಸ್ಥಿತರಿದ್ದರು.