Tuesday, September 26, 2023

ಅಡ್ಯನಡ್ಕ: ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ

Must read

ಅಡ್ಯನಡ್ಕ: ಅಡ್ಯನಡ್ಕ ಜನತಾ ಪ್ರೌಢಶಾಲೆಯ ವಿಜ್ಞಾನ ಮತ್ತು ಪರಿಸರ ಸಂಘದ ವತಿಯಿಂದ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು.
ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ. ನಾರಾಯಣ ಉಪಾಧ್ಯಾಯ ಮುಖ್ಯ ಅತಿಥಿಯಾಗಿದ್ದರು. ವಿಜ್ಞಾನ ಮತ್ತು ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕಿ ಕುಸುಮಾವತಿ ಅವರು ತಂಬಾಕು ರಹಿತ ದಿನದ ಬಗ್ಗೆ ಮಾತನಾಡಿದರು. ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಹಾಗೂ ವಿಜ್ಞಾನ ಮತ್ತು ಪರಿಸರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ಪ್ರಸ್ತಾವಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ್ ಎಸ್., ಬಲ್ಕೀಸಾಬಾನು, ವಿಶಾಖ್, ಪೂಜಾಶ್ರೀ, ಅಫೀಝ ಮಾತನಾಡಿದರು. ರಶ್ಮಿತಾ ಮತ್ತು ಬಳಗದವರು ಆಶಯಗೀತೆ ಹಾಡಿದರು. ಬಲ್ಕೀಸಾಬಾನು ಸ್ವಾಗತಿಸಿದರು. ಫಾತಿಮತ್ ಅಫೀಝ ಕಾರ್‍ಯಕ್ರಮ ನಿರೂಪಿಸಿದರು. ತೃಪ್ತಿ ವಂದಿಸಿದರು.

More articles

Latest article