Wednesday, October 18, 2023

ಮಾನಸಿಕ ರೋಗಿಗೆ ಚಿಕಿತ್ಸೆ ನೀಡಿಸಿದ ಎಸ್.ಐ.ಚಂದ್ರಶೇಖರ್

Must read

ಬಿ.ಸಿ.ರೋಡು ಮಠ ಕಾಮಾಜೆ ನಿವಾಸಿ ಯೊಗೀಶ್ ಕುಲಾಲ್ ಮಾನಸಿಕ ರೋಗಿಯಾಗಿದ್ದು ಇತ್ತೀಚೆಗೆ ತನ್ನ ಮನಸ್ಸಿನ ಅಸ್ಥಿರತೆಯಿಂದ ಅಪರಿಚಿತರಿಂದ*ಹಲ್ಲೆಗೊಳಗಾಗಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ಬಂದ ದೂರಿನ‌ ಹಿನ್ನಲೆಯಲ್ಲಿ ನಗರ ಠಾಣೆಯ ಎಸ್‌ಐ.ಚಂದ್ರಶೇಖರ್ ಹಾಗೂ ಪೋಲಿಸರ ಸಹಕಾರದಿಂದ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ . ಈ ಸಂದಭ೯ದಲ್ಲಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆಯ ಕೆ.ಕ್ರಷ್ಣಕುಮಾರ್ ಪೂಂಜರು. ಶೀಘ್ರವಾಗಿ ಸ್ಪಂದಿಸಿದರು. ಬಂಟ್ವಾಳ ಕುಲಾಲ ಕುಂಬಾರ ಯುವ ವೇದಿಕೆಯ ಅದ್ಯಕ್ಷರಾದ ಸುಕುಮಾರ್ ಬಂಟ್ವಾಳ. ಬಂಟ್ವಾಳ ಕುಲಾಲ ಸುಧಾರಕ ಸಂಘದ ಮಾಜಿ ಅದ್ಯಕ್ಷರಾದ ಸತೀಶ್ ಕುಲಾಲ್. ವೇದಿಕೆಯ ಸಲಹೆಗಾರರಾದ ಟಿ.ಶೇಷಪ್ಪ ಮಾಸ್ಟರ್.ಹಾಗೂ ಎಚ್.ಕೆ. ನಯನಾಡು. ವೇದಿಕೆಯ ಮಾಜಿ ಅದ್ಯಕ್ಷ ನಾರಾಯಣ. ಸಿ.ಪೆರ್ನೆ. ಪದಾಧಿಕಾರಿ ಸತೀಶ್ ಜಕ್ರಿಬೆಟ್ಟು ಇದ್ದರು. ಮುಂದಿನ ಚಿಕಿತ್ಸೆಗಾಗಿ. ಗಾಯಾಳುವಿನ ಆರೈಕೆಗಾಗಿ.

ಗುಂಡೂರಿ ಬಜಿರೆಯ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನ ಟ್ರಸ್ಟ್
ಹೊನ್ನಯ್ಯ ಕಾಟಿಪಳ್ಳ ಇವರನ್ನು ಸಂಪರ್ಕಿಸಿ ಮಾಹಿತಿ ನೀಡಿ. ಅವರು ಆಸ್ಪತ್ರಗೆ ಆಗಮಿಸಿ . ಅಸ್ವಸ್ಥನ ಆರೋಗ್ಯ ಮತ್ತು ಪಾಲನೆಯ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯುವ ವೇದಿಕೆಯ ರೋ!!ಎಸ್. ಜಯರಾಜ್ ಬಂಗೇರ. ಸುಕುಮಾರ್ ಬಂಟ್ವಾಳ. ಸೋಮನಾಥ ಸಾಲ್ಯಾನ್. ವಿಠಲ್ ಜಕ್ರಿಬೆಟ್ಟು ಉಪಸ್ಥಿತರಿದ್ದರು. ಏನೋ ಪರಿಸ್ಥಿತಿ ಯಲ್ಲಿ ಆಗಿರುವ ಮಾನಸಿಕ ಒತ್ತಡದಿಂದ ಯುವಕ ಯೋಗಿಶ್ ಗುಣಮುಖರಾಗಲು ನಿಮ್ಮ ಸಹಕಾರ ಬೇಕಿದೆ.

More articles

Latest article