Saturday, October 28, 2023

ಸಂಸದರಾದ ನಳಿನ್ ,ಶೋಭಾ ಕರಂದ್ಲಾಜೆಗೆ ಹುಟ್ಟೂರ ಅಭಿನಂದನೆ

Must read

ಬಂಟ್ವಾಳ: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪ್ರಚಂಡ ಬಹುಮತದಿಂದ ಮೂರನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದ ಸಂಸದ  ನಳಿನ್ ಕುಮಾರ್ ಕಟೀಲ್ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಎರಡನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದ ಶೋಭಾ ಕರಂದ್ಲಾಜೆ ಯವರಿಗೆ ತಮ್ಮ ಹುಟ್ಟೂರ ಅಭಿನಂದನಾ ಸಮಾರಂಬ ನಡೆಯಿತು.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಈ ಅಭಿನಂದನಾ ಸಮಾರಂಭ ಭಾನುವಾರ ನಡೆಯಿತು. ಶಾಸಕರಾದ  ಸಂಜೀವ ಮಠಂದೂರು ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾದ  ಚನಿಲ ತಿಮ್ಮಪ್ಪ ಶೆಟ್ಟಿ, ವಿಧಾನಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕಿ  ಮಲ್ಲಿಕಾ ಪ್ರಸಾದ್ ಭಂಡಾರಿ,  ಗೋಪಾಲ ಕೃಷ್ಣ ಹೇರಳೆ, ಭಾರತೀಯ ಜನತಾ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

More articles

Latest article