Tuesday, October 31, 2023

ತಾ.ಪಂ: ಅಧಿಕಾರಿಗಳ ಮಾಸಿಕ ಸಭೆ

Must read

ಬಂಟ್ವಾಳ: ತಾ.ಪಂ.ಮಾಸಿಕ ಅಧಿಕಾರಿಗಳ ಸಭೆ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅದ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಮಳೆಗಾಲ ಆರಂಭವಾಗುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಜನರಿಗೆ ಯಾವುದೇ ಸಮಸ್ಯೆ ಗಳು ಉಂಟಾದ ರೆ ಶೀಘ್ರವಾಗಿ ಸ್ಪಂದಿಸುವ ಮನಸ್ಸು ಮಾಡಿ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧಿಕಾರಿಗಳಿಗೆ ತಿಳಿಸಿದರು.
ತಾ.ಪಂ.ಉಪಾಧ್ಯಕ್ಷ ಮಾತನಾಡಿ  ತಾ.ಮಟ್ಟದ ಅಧಿಕಾರಿಗಳು ಮಾಸಿಕ ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕೆಲಸ ಮಾಡುವಂತೆ ತಿಳಿಸಿದರು.
12 ರಸ್ತೆ , 28 ಶಾಲಾ ಸಂಪರ್ಕ ಸೇತು ಯೋಜನೆ ಹಾಗೂ 6 ಪಿ.ಯು.ಕಾಲೇಜು ಕಟ್ಟಡಗಳು ಮಂಜೂರಾತಿ ಪಡೆದು ಟೆಂಡರ್ ಹಂತದಲ್ಲಿದೆ.
ಮಂಗಳೂರು ಮುಡಿಪುವಿನಲ್ಲಿರುವ ಕೇಂದ್ರ ಕಾರಾಗ್ರಹ ಕಾಮಗಾರಿ ಟೆಂಡರ್ ಹಂತದಲ್ಲಿ ದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.
ಮಳೆಗಾಲ ಆರಂಭದಲ್ಲಿ ರಸ್ತೆ ಮತ್ತು  ಸುರಕ್ಷತಾ ದೃಷ್ಟಿಯಿಂದ ಚರಂಡಿ ಹಾಗೂ ಇನ್ನೂ  ಬೇಕಾದ ವ್ಯವಸ್ಥೆ ಗಳನ್ನು ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಇ.ಒ.ಸೂಚನೆ ನೀಡಿದರು.
ಸರ್ವರ್ ಸಮಸ್ಯೆ ಯಿಂದ ಅಹಾರ ಶಾಖೆಯ ಕೆಲಸಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆ ಯಾಗುತ್ತಿದೆ ಎಂದು ಅಹಾರ ಶಾಖಾ ಇಲಾಖೆಯ ಅಧಿಕಾರಿ ಸಭೆಯ ಗಮನಕ್ಕೆ ತಂದರು.
ಅಂಗನವಾಡಿ ಶಾಲಾ ಕಟ್ಟಡಗಳಿಗೆ ಹೊಸ ರೂಪು ನೀಡಿ‌ಮಕ್ಕಳ ಸಂಖ್ಯೆ ಹೆಚ್ಚಳ ವಾಗುವಂತೆ ಸಿ.ಡಿ.ಪಿ.ಒ.ಇಲಾಖಾ ಅಧಿಕಾರಿಗಳು ಯೋಜನೆ ರೂಪಿಸಿ ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ತಿಳಿಸಿದರು.
ಅಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದಾಗಿ ಅಂಗನವಾಡಿಗಳನ್ನು ಉಳಿಸಿಕೊಳ್ಳಲು ಸರಕಾರಿ ಶಾಲೆಗಳ ಜೊತೆಯಲ್ಲಿ ಸೇರಿಕೊಂಡು ಮುನ್ನಡೆ ಯುವುದು ಉತ್ತಮ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ತಿಳಿಸಿದರು.
ಅಂಗನವಾಡಿಯ ಅನುದಾನಗಳನ್ನು ಯಥಾವತ್ತಾಗಿ ಬಳಸಿಕೊಂಡು , ಅಂಗ್ಲ ಮಾದ್ಯಮ ಶಿಕ್ಷಣ ವನ್ನು ಸರಕಾರಿ ಶಾಲೆಯ ಮುಖಾಂತರ ನೀಡುವ ಯೋಚನೆ ಮಾಡಬೇಕಾಗುತ್ತದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.
ಈ ಬಾರಿ ಸರಕಾರ ಸರ್ಕಾರಿ ಶಾಲೆಗಳಲ್ಲಿ ಅಂಗ್ಲ ಮಾಧ್ಯಮ ಶಿಕ್ಷಣ ನೀಡಲು ಅವಕಾಶ ನೀಡಿದ್ದರಿಂದ ಈ ಯೋಚನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದುರಸ್ತಿ ಯಲ್ಲಿರುವ ಅಂಗನವಾಡಿ ಗಳನ್ನು ಪಟ್ಟಿ ಮಾಡಿ ಅಂತಹ ಅಂಗನವಾಡಿ ಕೇಂದ್ರಗಳ ರಿಪೇರಿ ಮಾಡುವ ಯೋಜನೆ ಕೈಬಿಟ್ಟು ನೂತನ ಕಟ್ಟಡ ನಿರ್ಮಾಣ ಮಾಡುವ ಯೋಚನೆ ಮಾಡುವ ಎಂದು ಇ.ಒ.ರಾಜಣ್ಣ ತಿಳಿಸಿದರು.
ಪ್ರತಿ ವರ್ಷ ಹಂಚಿನ ಮಾಡು ಇರುವ ಅಂಗನವಾಡಿಗಳ ದುರಸ್ತಿ ಕಾರ್ಯಕ್ಕೆ ಹಣ ಖರ್ಚಾಗುತ್ತದೆ, ಅ ನಿಟ್ಟಿನಲ್ಲಿ ಅನಾವಶ್ಯಕ ಪ್ರತಿ ವರ್ಷ ರಿಪೇರಿ ಗೆ ಖರ್ಚಾಗುವ ಹಣವನ್ನು ಕಡಿಮೆ ಮಾಡುವ ಉದ್ದೇಶದಿಂದ ನೂತನ ಕಟ್ಟಡ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಗ್ರಾ.ಪಂ.ನಿಂದ ಯಾವುದೇ ರೀತಿಯಲ್ಲಿ ದೂರು ಬಾರದ ರೀತಿಯಲ್ಲಿ ಮೆಸ್ಕಾಂ ಕಾರ್ಯನಿರ್ವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಇ.ಒ.ರಾಜಣ್ಣ ತಿಳಿಸಿದರು.

More articles

Latest article