Saturday, October 21, 2023

ಸಂಸದ, ಶಾಸಕರ ನೇತೃತ್ವದಲ್ಲಿ ಬಿ.ಸಿ ರೋಡ್ ಸುಂದರೀಕರಣದ ಅಂತಿಮ ರೂಪುರೇಷೆಯ ಸಭೆ

Must read

ಬಂಟ್ವಾಳ:  ಬಿ.ಸಿ ರೋಡ್ ಸುಂದರೀಕರಣದ ಅಂತಿಮ ರೂಪುರೇಷೆಯ ಸಭೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲುರವರ ನೇತೃತ್ವದಲ್ಲಿ ಸಾಮರ್ಥ್ಯ ಸೌಧದಲ್ಲಿ ನಡೆಯಿತು. ಖ್ಯಾತ ವಿನ್ಯಾಸಗಾರ ಧರ್ಮರಾಜ್ ಯೋಜನೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರವಿಚಂದ್ರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್, ಎಎಸ್ಪಿ ಸೈದುಲ್ ಅಡಾವತ್, ಲೋಕೋಪಯೋಗಿ ಇಲಾಖೆಯ ಉಮೇಶ್ ಭಟ್, ಪೋಲೀಸ್ ಇಲಾಖೆ, ಸಾರಿಗೆ ಇಲಾಖೆ, ಪುರಸಭೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article