ಬಂಟ್ವಾಳ: ಅಂತರಾಷ್ಟ್ರೀಯ ರೋಟರಿ ಇದರ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಕಂದಾಯ ಜಿಲ್ಲಾ ವ್ಯಾಪ್ತಿಯ ನ್ನೊಳಗೊಂಡ ರೋಟರಿ ಜಿಲ್ಲೆ 3181ಇದರ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಕೋರ್ಡೇಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.
ನೂತನವಾಗಿ ಆರಂಭವಾದ ರೋಟರಿ ಕ್ಲಬ್ ಬಂಟ್ವಾಳ ಟೌನ್ಇದರ ಅತ್ಯುತ್ತಮ ಸಾಧನೆಗಾಗಿ ಲಾರ್ಜ್ ಕ್ಲಬ್ ನ ವಿಭಾಗದಲ್ಲಿ 5 ಪ್ರಥಮ ಸ್ಥಾನ ಹಾಗೂ 4 ತೃತೀಯ ಸ್ಥಾನ ಪ್ರಶಸ್ತಿಗಳನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್ ರಿಗೆ ಜಿಲ್ಲಾ ಗವರ್ನರ್ ರೋಹಿನಾಥ್ ಪಾದೆ ಹಸ್ತಾಂತರ ಮಾಡಿದರು. ಸಮಾರಂಭದಲ್ಲಿ ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ಜಿಲ್ಲಾ ಅವಾರ್ಡ್ ಕಮಿಟಿ ಚೆಯರ್ ಮೇನ್ ಜಯರಾಮ ಕೋಟ್ಯಾನ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಪದಾಧಿಕಾರಿಗಳು ಉಪಸ್ತಿತರಿದ್ದರು.