Friday, October 20, 2023

ವಿಟ್ಲ: ಲಯನ್ಸ್‌ನಿಂದ ಪೌರಕಾರ್‍ಮಿಕರಿಗೆ ರೈನ್‌ಕೋಟ್ ವಿತರಣೆ

Must read

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸ್ವಚ್ಛ ಭಾರತ ಅಂಗವಾಗಿ ಪಂಚಾಯಿತಿ ಪೌರಕಾರ್‍ ಮಿಕರಿಗೆ ರೈನ್ ಕೋಟ್‌ಗಳನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯಕ್ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಲಯನ್ಸ್ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ಮಾತನಾಡಿ ಸ್ವಚ್ಛ ಭಾರತ ಅಡಿಯಲ್ಲಿ ಇನ್ನೂ ಹಲವಾರು ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್‍ಯದರ್ಶಿ ಮನೋಜ್ ಕುಮಾರ ರೈ, ಕೋಶಾಧಿಕಾರಿ ಮಹಮ್ಮದ್ ಖಲಂದರ್, ವಿಟ್ಲ ಮಂಗೇಶ ಭಟ್, ಲಯನ್ ಟೇಮರ್ ರವಿಶಂಕರ್, ಸ್ಥಾಯಿಸಮಿತಿ ಅಧ್ಯಕ್ಷ ರವಿಪ್ರಕಾಶ್ ಹಾಗೂ ಪಂಚಾಯಿತಿ ಇತರ ಸದಸ್ಯರು ಉಪಸ್ಥಿತರಿದ್ದರು.
ನಿಕಟಪೂರ್ವ ಪಟ್ಟಣ ಪಂಚಾಯತಿ ಅಧ್ಯಕ್ಷ ಅರುಣ ಎಂ. ವಂದಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ವಿ.ರಾಮದಾಸ ಶೆಣೈ ಸ್ವಾಗತಿಸಿದರು.

 

More articles

Latest article