ವಿಟ್ಲ: ಪುಣಚ ಗ್ರಾಮದ ಆಜೇರು ಮಲ್ಯ ಅನಾವುಗುಡ್ಡೆಯ ರಸ್ತೆಗೆ ಡಾಂಬರೀಕರಣ ಮತ್ತು ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಟ್ಟು ಹಿಡಿದು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಪುಣಚ ಗ್ರಾಮ ಪಂಚಾಯಿತಿ ಮುಂಭಾಗ ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರು ಪುಣಚ ಗ್ರಾಮದ ಆಜೇರು ಎಂಬಲ್ಲಿ ಪರಿಶಿಷ್ಟ ಪಂಗಡದವರು ಹಾಗೂ ಇತರ ಜಾತಿಯವರು ವಾಸ ಮಾಡುವ ಹಲವು ಕುಟುಂಬಗಳಿವೆ. ಗ್ರಾಮ ಅತ್ಯಂತ ಒಳಪ್ರದೇಶವಾದ ಇಲ್ಲಿಗೆ ತೆರಳುವ ಮಣ್ಣಿನ ರಸ್ತೆಗೆ ಇನ್ನೂ ಸಹ ಡಾಂಬರೀಕರವಾಗಿಲ್ಲ. ಈ ಭಾಗದ ಜನರಿಗೆ ನೀರಿನ ಸಮಸ್ಯೆಯೂ ಇದೆ. ಡಾಂಬರೀಕರಣ ಹಾಗೂ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಈ ಹಿಂದೆ ಸಂಬಂಧಪಟ್ಟ ಇಲಾಖೆಗೆ, ಶಾಸಕರಿಗೆ, ಸಂಸದರಿಗೆ, ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ನೀಡಿದ ಭರವಸೆ ಇದುವರೆಗೂ ಈಡೇರಿಕೆಯಾಗಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ನಡೆಸುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ನಾಗರಿಕರನ್ನು ಮನವೊಲಿಸುವ ಪ್ರಯತ್ನವಾಗಿಲ್ಲ. ಅವರಿಗೆ ಬಡವರ ಮೇಲೆ ಕಾಳಜಿ ಇಲ್ಲ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಸರಕಾರಗಳು ಅನಗತ್ಯ ಯೋಜನೆಗಳಿಗೆ ಹಣ ಪೋಲು ಮಾಡುತ್ತಿದೆ. ಬಡವರ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಅಧಿಕಾರಿಗಳು, ಶಾಸಕರು ತಕ್ಷಣವೇ ಇಲ್ಲಿಗೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿ ಅವರು ಈ ಭಾಗದ ರಸ್ತೆ ಹಾಗೂ ನೀರಿನ ಬಗ್ಗೆ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರ ಮಳೆ ಹಾನಿ ಯೋಜನೆಯಲ್ಲಿ 10 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಇನ್ನುಳಿದ 800 ಮೀ ರಸ್ತೆ ಅನುದಾನದ ಕೊರತೆಯಿಂದ ಬಾಕಿಯಾಗಿದ್ದು, ಇಲಾಖೆಗೆ ಎಸ್ಟಿಮೇಟ್ ತಯಾರಿಸಿ ಮನವಿ ಸಲ್ಲಿಸಲಾಗಿದೆ ಎಂದರು.
ಪುಣಚ ಗ್ರಾಮ ಬಿಜೆಪಿ ಅಧ್ಯಕ್ಷ ಹರೀಶ್ ಮಾತನಾಡಿ ಕುಡಿಯುವ ನೀರಿನ ವ್ಯವಸ್ಥೆಗೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಅದಕ್ಕೆ ತೃಪ್ತರಾಗದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಸ್ಥಳಕ್ಕೆ ಶಾಸಕರು, ಉನ್ನತಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಆಗಮಿಸಿ ಇಲಾಖೆಯಿಂದ ಆಗುವ ಸಹಕಾರ ಮಾಡುವುದಾಗಿ ಸಮಾಧಾನ ಪಡಿಸಿದರು. ಅವರೇ ಪುತ್ತೂರು ಶಾಸಕರಲ್ಲಿ ದೂರವಾಣಿಯ ಮೂಲಕ ಮಾತನಾಡಿ ವಿಷಯ ಪ್ರಸ್ತಾಪಿಸಿದರು. ಶಾಸಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರಲ್ಲಿ ತುರ್ತಾಗಿ ೧೦ ಲಕ್ಷ ರೂ. ಅನುದಾನ ಇಡುವುದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಪಿಡಿಒ ಪಂಚಾಯಿತಿ ಈ ಬಗ್ಗೆ ಗಂಭೀರವಾಗಿ ಗಮನಹರಿಸುವುದಾಗಿ ಲಿಖಿತ ಹೇಳಿಕೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ವಿಟ್ಲ ಪೊಲೀಸರು ಬಿಗೀ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಮೌಖಿಕ ಭರವಸೆ ಬಳಿಕ
ಪ್ರತಿಭಟನೆಯಲ್ಲಿ ದಲಿತ್ ಸೇವಾ ಸಮಿತಿಯ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮ ದಡ್ಡಲ್ತಡ್ಕ, ಪುತ್ತೂರು ತಾ. ಅಧ್ಯಕ್ಷ ರಾಜು ಹೊಸ್ಮಠ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್ ತಿಮ್ಮಣ್ಣ ನಾಯ್ಕ ಆಜೇರು, ಶಂಕರ ಭಟ್ ಮಡೆರೊಟ್ಟು, ಜತ್ತಪ್ಪ ಪೂಜಾರಿ ಆಜೇರು, ಸಂಘಟನಾ ಕಾರ್‍ಯದರ್ಶಿ ರವಿನಾಯ್ಕ ಅನೊವುಗುಡ್ಡೆ, ಸೇಸಪ್ಪ ನಾಯ್ಕ ಅನೊವುಗುಡ್ಡೆ, ಕುಶಲಪ್ಪ ಮೂಡಂಬೈಲು, ಕೃಷ್ಣಪ್ಪ ಅಜ್ಜಿನಡ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here